ಬಂದಾರು :(ಡಿ.20) ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿ ಯಲ್ಲಿ ಪೆರ್ಲ ಬೈಪಾಡಿ
ಇದನ್ನೂ ಓದಿ: ಬೆಳ್ತಂಗಡಿ: ಚಿಕ್ಕಮಗಳೂರಿನಲ್ಲಿ ಬೈಕ್ ಗೆ ಡಿಕ್ಕಿ ಹೊಡೆದ ಕಾರು
ಶ್ರೀ ಸಿದ್ದಿವಿನಾಯಕ ದೇವಸ್ಥಾನ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರದಿಂದ 2 ಲಕ್ಷ ರೂಪಾಯಿಗಳ ಡಿ ಡಿ ಯನ್ನು ಬೆಳ್ತಂಗಡಿ ತಾಲ್ಲೂಕಿನ ಯೋಜನಾಧಿಕಾರಿಯವರಾದ ಶ್ರೀ ಸುರೇಂದ್ರ ಕುಮಾರ್ ಅವರು ಬ್ರಹ್ಮಕಲಶೋತ್ಸವ ಸಮಿತಿಗೆ ಡಿ ಡಿ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಉಜಿರೆ ವಲಯದ ಮೇಲ್ವಿಚಾರಕಿ ವನಿತಾ, ಬೈಪಾಡಿ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಪ್ರಮೀಳಾ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಮಹಾಬಲ ಗೌಡ, ಕಾರ್ಯದರ್ಶಿ ಹರೀಶ್ ಗೌಡ,
ಆಡಳಿತ ಮಂಡಳಿಯ ಅಧ್ಯಕ್ಷರಾದ ರಮೇಶ ಗೌಡ, ಹೊನ್ನಪ್ಪ ಗೌಡ ಸೋಣಕುಮೇರು, ಆದಪ್ಪ ಗೌಡ ಹಾರ್ತ್ಯಾರು, ಬಂದಾರು ಪಂಚಾಯತ್ ಸದಸ್ಯರಾದ ಅನಿತಾ ಉದಯ ಕುರುಡಂಗೆ, ಬೈಪಾಡಿ ಒಕ್ಕೂಟದ ಅಧ್ಯಕ್ಷರಾದ ಶಶಿಧರ ಗೌಡ ಹಾಗೂ ಒಕ್ಕೂಟದ ಪದಾಧಿಕಾರಿಗಳು, ಪ್ರಮುಖರು, ಉಪಸ್ಥಿತರಿದ್ದರು.