ಧರ್ಮಸ್ಥಳ:(ಡಿ.20) ಧರ್ಮಸ್ಥಳ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಧರ್ಮಸ್ಥಳ ಇಲ್ಲಿ 2024 _25 ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಶ್ರೀ. ಧ ಮ.ಪ್ರೌಢಶಾಲೆ ಇಲ್ಲಿಯ ಶಾರೀರಿಕ ಶಿಕ್ಷಕರಾದ ಶ್ರೀ ಕೃಷ್ಣಾನಂದ ಬೆಳಾಲು ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಇದನ್ನೂ ಓದಿ: ಕಡಬ: ಅಪ್ರಾಪ್ತ ಹುಡುಗಿಯ ಅತ್ಯಾಚಾರ ಪ್ರಕರಣ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇವರು ಮಕ್ಕಳು ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಆಟೋಟ ಸ್ಪರ್ಧೆಗಳಲ್ಲಿಯೂ ಭಾಗವಹಿಸಬೇಕು. ಆಟದಲ್ಲಿ ಸೋಲು ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದು ಹೇಳುತ್ತಾ ಸ್ಪರ್ಧಿಗಳಿಗೆ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಕಮಲ್ ತೇಜು ರಜಪೂತ್ , ಯಕ್ಷಗಾನ ಗುರುಗಳಾದ ಶ್ರೀ ಲಕ್ಷ್ಮಣ್ ಗೌಡ ಬೆಳಾಲು ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮವನ್ನು ದೈಹಿಕ ಶಿಕ್ಷಕರಾದ ಶ್ರೀ ಸಂಜೀವ ಕೆ ನಿರ್ವಹಿಸಿದರು.