Sat. Dec 28th, 2024

Dharmasthala: ನೇತ್ರಾವತಿ ಸ್ನಾನಘಟ್ಟದ ರಸ್ತೆ ಅವ್ಯವಸ್ಥೆ – ಬಾಳೆ ನೆಟ್ಟು ಸಾರ್ವಜನಿಕರ ಆಕ್ರೋಶ

ಧರ್ಮಸ್ಥಳ :(ಡಿ.20) ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದಲ್ಲಿರುವ ಗುಂಡಿಮಯ ರಸ್ತೆಗೆ ಸಾರ್ವಜನಿಕರು ಬಾಳೆಗಿಡ ನೆಡುವ ಮೂಲಕ ಪ್ರತಿಭಟನೆ ನಡೆಸಿದರು. ಜೋಡುಸ್ಥಾನ, ನೇತ್ರಾವತಿ, ಅಜುಕುರಿ ಭಾಗದ ಸಾರ್ವಜನಿಕರು ಸೇರಿಕೊಂಡು ಪ್ರತಿಭಟಿಸಿದರು.

ಇದನ್ನೂ ಓದಿ: ಉಜಿರೆ: ಎಸ್.ಡಿ‌.ಎಂ ವಿದ್ಯಾರ್ಥಿಗಳ ಟ್ಯಾಲೆಂಟ್ಸ್ ಡೇ -2024

ಧರ್ಮಸ್ಥಳದ ಪ್ರಮುಖ ರಸ್ತೆಗೆ ಹೊಂದಿಕೊಂಡಿರುವ ಈ ರಸ್ತೆ ಚಾರ್ಮಾಡಿಯ ಪ್ರಮುಖ ರಸ್ತೆಯಲ್ಲಿರುವ ಮುಂಡಾಜೆಗೆ ಸಂಪರ್ಕವನ್ನು ಹೊಂದಿದೆ. ನೇತ್ರಾವತಿ ಸ್ನಾನಘಟ್ಟದ ಆರಂಭದಿಂದ ಸರಿ ಸುಮಾರು 1 ಕಿ.ಮೀ ದೂರದಷ್ಟು ಹೊಂಡದಿಂದ ತುಂಬಿ ರಸ್ತೆಯೋ ಅಥವಾ ಗುಂಡಿಯೋ ಎನ್ನುವಂತಾಗಿದೆ.

ವಾಹನ ಸವಾರರು ಈ ರಸ್ತೆಯಲ್ಲಿ ಸಾಗಲು ಹರಸಾಹಸ ಪಡುತ್ತಿದ್ದಾರೆ. ಹೀಗಾಗಿ ನಿನ್ನೆ ರಾತ್ರಿ ಸಾರ್ವಜನಿಕರು ಸೇರಿ ಬಾಳೆ ಗಿಡ ನೆಟ್ಟಿದ್ದಾರೆ. ಇಂದು ಮತ್ತೆ ಪ್ರತಿಭಟನೆಗೆ ಮುಂದಾಗಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪಂಚಾಯತ್ ಅಧಿಕಾರಿಗಳು..!
ಇನ್ನು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಧರ್ಮಸ್ಥಳ ಗ್ರಾಮ ಪಂಚಾಯತ್ ಪಿಡಿಒ ಮತ್ತು ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸುವ ಕೆಲಸ ಮಾಡಿದರು.

ಈ ರಸ್ತೆ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ನಿರ್ಮಾಣ ಮಾಡಿದ್ದು, ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಬರುತ್ತದೆ ಎಂದು ತಿಳಿ ಹೇಳಿದರು. ಅಲ್ಲದೇ, ಈಗಾಗಲೇ ಜಿಲ್ಲಾ ಪಂಚಾಯತ್ ಈ ರಸ್ತೆ ಸಮಸ್ಯೆ ಬಗ್ಗೆ ವರದಿಯನ್ನು ನೀಡಿದ್ದೇವೆ. ಅನುದಾನಕ್ಕೆ ಮನವಿ ನೀಡಿದ್ದೇವೆ ಎಂದು ಪಿಡಿಒ ತಿಳಿಸಿದರು.

ವಾರ್ಡ್ ಸದಸ್ಯರಿಗೆ ಮನವಿ ಸಲ್ಲಿಕೆ…!
ಈ ಭಾಗದ ವಾರ್ಡ್ ಸದಸ್ಯರಾಗಿರುವ ಶ್ರೀನಿವಾಸ್ ರಾವ್ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪ್ರತಿಭಟನಾಕಾರರು ಅವರ ಮುಂದೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ರಸ್ತೆ ಸರಿ ಪಡಿಸುವಂತೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಶ್ರೀನಿವಾಸ್ ರಾವ್, ರಸ್ತೆ ಸಮಸ್ಯೆ ಬಗ್ಗೆ ಈಗಾಗಲೇ ತಿಳಿದಿದ್ದು, ಈ ತಿಂಗಳ ಕೊನೆಗೆ ಸಾಮಾನ್ಯ ಸಭೆ ಮೂಲಕ ಇದನ್ನು ಚರ್ಚಿಸುತ್ತೇವೆ.

ಜಿಲ್ಲಾ ಪಂಚಾಯತ್ ಗೂ ಅನುದಾನಕ್ಕೆ ಬೇಡಿಕೆ ಇಡುತ್ತೇವೆ. ಅಲ್ಲದೇ ಶಾಸಕರ ನಿಧಿಯಿಂದ ಕೆಲಸ ಮಾಡಲು ಸಾಧ್ಯವೇ ಎಂದು ನೋಡುತ್ತೇವೆ. ಎಲ್ಲಾ ಆಯಾಮಗಳಲ್ಲೂ ಪ್ರಯತ್ನಿಸುತ್ತೇವೆ. ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

Leave a Reply

Your email address will not be published. Required fields are marked *