ಪುಣೆ:(ಡಿ.20) ಭಾರತದಲ್ಲಿ ಅಲ್ಪಸಂಖ್ಯಾತರ ಬಗ್ಗೆ ಗಮನ ನೀಡಬೇಕು ಎಂದು ಆಗಾಗ ಸಲಹೆಗಳು ಕೇಳಿ ಬರುತ್ತಿವೆ. ಆದರೆ ಬೇರೆ ದೇಶಗಳಲ್ಲಿ ಅಲ್ಪಸಂಖ್ಯಾತರ ಮೇಲೆ ಏನಾಗುತ್ತಿದೆ ಎಂಬುದನ್ನು ನಾವು ಈಗ ನೋಡುತ್ತಿದ್ದೇವೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ
ಮೋಹನ್ ಭಾಗವತ್ ಹೇಳಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳ : ನೇತ್ರಾವತಿ ಸ್ನಾನಘಟ್ಟದ ರಸ್ತೆ ಅವ್ಯವಸ್ಥೆ
ಈ ಮೂಲಕ ಅವರು ವಿದೇಶಗಳಲ್ಲಿನ ಹಿಂದುಗಳ ಪರಿಸ್ಥಿತಿ ಕುರಿತು ಗಮನ ಸೆಳೆದಿದ್ದಾರೆ. ‘ಹಿಂದು ಸೇವಾ ಮಹೋತ್ಸವ’ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು,
ವಿಶ್ವಶಾಂತಿಯ ಕುರಿತು ಮಾತನಾಡುವ ಮೂಲಕ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ವಿಶ್ವಶಾಂತಿಯ ಬಗ್ಗೆ ದೊಡ್ಡ ಘೋಷಣೆಗಳನ್ನು ಮಾಡಲಾಗುತ್ತಿದೆ, ಭಾರತಕ್ಕೂ ವಿಶ್ವಶಾಂತಿಯ ಬಗ್ಗೆ ಸಲಹೆಗಳನ್ನು ನೀಡಲಾಗುತ್ತಿದೆ.
ಆದರೆ, ಯುದ್ಧಗಳು ನಿಲ್ಲುತ್ತಿಲ್ಲ. ನಮ್ಮಲ್ಲಿ (ಭಾರತದಲ್ಲಿ) ಅಲ್ಪಸಂಖ್ಯಾತರ ಬಗ್ಗೆ ಚಿಂತಿಸುವಂತೆ ಹೇಳಲಾಗುತ್ತಿದೆ. ಇದೇ ವೇಳೆ ದೇಶದ ಹೊರಗೆ ಅಲ್ಪಸಂಖ್ಯಾತರ ಪರಿಸ್ಥಿತಿ ಏನಿದೆ ಎಂಬುದಕ್ಕೂ ನಾವು ಸಾಕ್ಷಿ ಆಗುತ್ತಿದ್ದೇವೆ ಎಂದರು.
ಮಾನವ ಧರ್ಮ ಎಲ್ಲ ಧರ್ಮಗಳ ಶಾಶ್ವತ ಧರ್ಮ, ಅದನ್ನೇ ವಿಶ್ವ ಧರ್ಮ, ಹಿಂದು ಧರ್ಮ ಎಂದೂ ಕರೆಯಲಾಗುತ್ತಿದೆ. ಆದರೆ ಜಗತ್ತು ಈ ಧರ್ಮವನ್ನೇ ಮರೆತಿದೆ ಎಂದು ಭಾಗವತ್ ಹೇಳಿದ್ದಾರೆ.