Tue. Apr 8th, 2025

Sakleshpur: ಸನ್ಮಾನ್ಯ ಸಿ.ಟಿ ರವಿ ಅವರ ಮೇಲೆ ಸುವರ್ಣಸೌಧ ಒಳಗೆ ಹಲ್ಲೆ ನಡೆಸಿದ ಗೂಂಡಾಗಳ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ದತ್ತಪೀಠ ಮುಕ್ತಿ ಹೋರಾಟ ಸಮಿತಿ ಸಂಚಾಲಕ್

ಸಕಲೇಶಪುರ:(ಡಿ.20) ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯ ಸಿ.ಟಿ.ರವಿರವರ ಮೇಲೆ ಡಿ. 19 ರಂದು ಸುವರ್ಣ ಸೌಧದೊಳಗೆ ಕೆಲ ಕಿಡಿಗೇಡಿಗಳು ಹಲ್ಲೆ ನಡೆಸಲು ಮುಂದಾಗಿದ್ದು ದುರದುಷ್ಟಕರವಾಗಿದೆ.

ಇದನ್ನೂ ಓದಿ: ಮಂಗಳೂರು : ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ

ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಪೋಲಿಸರು ಹಲ್ಲೆ ನಡೆಸಿರುವ ಗೂಂಡಾಗಳನ್ನು ವಿಧಾನ ಪರಿಷತ್ ಸದಸ್ಯರವನ್ನು ಬಂಧಿಸಿ. ನ್ಯಾಯಾಲಯಕ್ಕೆ ಹಾಜರುಪಡಿಸದೆ ಪೋಲೀಸ್ ಸುಪರ್ದಿಯಲ್ಲಿದ್ದಾಗಲೇ ಅವರ ಮೇಲೆ ಪೋಲಿಸರಿಂದ ಹಲ್ಲೆ ನಡೆದಿರುವುದು ಕಾನೂನು ಬಾಹಿರವಾಗಿದ್ದು, ತೀವ್ರವಾಗಿ ತಲೆಗೆ ಪೆಟ್ಟಾಗಿದ್ದರು ಸಹ ತಕ್ಷಣ ಚಿಕಿತ್ಸೆ ಕೊಡಿಸದೆ ಪೋಲೀಸ್ ಜೀಪಿನಲ್ಲಿ ಸುತ್ತಾಡಿಸಿದ್ದು ಅಮಾನವೀಯ ಘಟನೆಯಾಗಿದೆ.

ಕಾನೂನು ಕಾಪಾಡಬೇಕಾದ ಇಲಾಖೆಗಳು ಕೈಕಟ್ಟಿ ಕುಳಿತಿದ್ದು, ಗೂಂಡಾ ರಾಜ್ಯದಂತೆ ಬಿಂಬಿಸುತ್ತಿದೆ. ಈ ಬಗ್ಗೆ ರಾಜ್ಯಪಾಲರು ಮಧ್ಯೆ ಪ್ರವೇಶಿಸಿ, ಪೋಲಿಸ್ ಇಲಾಖೆ ಹಾಗೂ ಬೆಳಗಾವಿ ಸುವರ್ಣ ಸೌಧದೊಳಗೆ ಬಂದು ಹಲ್ಲೆಗೆ ಮುಂದಾಗಿರುವ ಗೂಂಡಾ ಶಾಮಿಲಾಗಿರುವವರ

    ಸೂಕ್ತ ಕಾನೂನು ಕ್ರಮಕೈಗೊಂಡು ಸನ್ಮಾನ್ಯ ವಿಧಾನ ಪರಿಷತ್‌ ಸದಸ್ಯರಾದ ಸಿ.ಟಿ.ರವಿರವರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಸಕಲೇಶಪುರದಲ್ಲಿ ದತ್ತಪೀಠ ಮುಕ್ತಿ ಹೋರಾಟ ಸಮಿತಿಯ ಸಂಚಾಲಕ್ ಶಿವು ಜಿಪ್ಪಿ ಉಪವಿಭಾಗಾಧಿಕಾರಿ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

    Leave a Reply

    Your email address will not be published. Required fields are marked *