ಉಜಿರೆ:(ಡಿ.20) ಪೂಜ್ಯ ಖಾವಂದರು ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರ ಶುಭಾಶೀರ್ವಾದಗಳೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಉಜಿರೆಯ ವತಿಯಿಂದ ಪುಟಾಣಿ ಮಕ್ಕಳ ಅತ್ಯದ್ಭುತ ಪ್ರತಿಭಾ ಪ್ರದರ್ಶನದ ವೇದಿಕೆ ‘ಟ್ಯಾಲೆಂಟ್ಸ್ ಡೇ – 2024 ನಡೆಯಲಿದೆ.
ಇದನ್ನೂ ಓದಿ: ಮಂಗಳೂರು: ವಿಚಾರಣಾಧೀನ ಖೈದಿ ಸಫ್ವಾನ್ ಮೇಲೆ ಸಹ ಖೈದಿ ಬೆಳ್ತಂಗಡಿಯ ರಿಝಾನ್ ಹಲ್ಲೆ!!
ಪೂಜ್ಯರಾದ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಇಂದ್ರಪ್ರಸ್ಥ ಆಡಿಟೋರಿಯಂ ನಲ್ಲಿ ಇದೇ ಬರುವ 21ನೇ ತಾರೀಕಿನಂದು ಈ ಸಂಭ್ರಮ ನಡೆಯಲಿದ್ದು ‘ಪರಿವರ್ತನೆ’ ಎಂಬ ಹೊಸ ವಿಚಾರವನ್ನು ಇಟ್ಟುಕೊಂಡು ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ.
ಹಳೆ ಕಾಲದ ಸಂಪ್ರದಾಯದಿಂದ ಹೊಸತನಕ್ಕೆ ಜನ ಹೇಗೆ ಒಗ್ಗಿಕೊಂಡಿದ್ದಾರೆ ಮತ್ತು ಆ ಹೊಸತನದಲ್ಲಿಯೂ ಹಳೆಯ ಸಂಸ್ಕಾರಗಳನ್ನು ಹೇಗೆ ತುಂಬಿಕೊಂಡು ಬದುಕುತ್ತಾರೆ ಎನ್ನುವ ವಿಚಾರವನ್ನಿಟ್ಟುಕೊಂಡು ಕಾರ್ಯಕ್ರಮ ನಡೆಯುತ್ತದೆ. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತಮ್ಮ ತಯಾರಿಯನ್ನು ನಡೆಸುತ್ತಿದ್ದಾರೆ. ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವೇದಿಕೆಯನ್ನು ತಮ್ಮ ಪ್ರತಿಭೆಯ ಮೂಲಕ ಅಂದಗೊಳಿಸಲಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನದ ಸಾಂಸ್ಕೃತಿಕ ಹಬ್ಬವಾದ ಟ್ಯಾಲೆಂಟ್ಸ್ ಡೇ – 2024, ದಿನಾಂಕ: 21-12-2024ನೇ ಶನಿವಾರ ನಡೆಯಲಿದೆ. ಇಂದ್ರಪ್ರಸ್ಥ ಆಡಿಟೋರಿಯಂ, ಉಜಿರೆ ಈ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಪ್ರಾಂಜಲ್ ಡಿ. ಶೆಟ್ಟಿ ಎಸ್.ಪಿ.ಎಲ್, ಮನಮೋಹನ್ ನಾಯಕ್ ಕೆ.ಜಿ, ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಸರ್ವರನ್ನೂ ಆತ್ಮೀಯವಾಗಿ ಸ್ವಾಗತಿಸುತ್ತಿದ್ದಾರೆ.
ಹಲವು ವಿಶೇಷತೆಗಳ ಜೊತೆಗೆ ಇಂದ್ರಪ್ರಸ್ಥ ಆಡಿಟೋರಿಯಂನಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಲಿದೆ.