Fri. Dec 27th, 2024

Kadaba: 13 ವರ್ಷಗಳ ಬಳಿಕ ತಾಯಿಯಾದ ಖುಷಿಯಲ್ಲಿದ್ದ ನಾಲ್ಕು ತಿಂಗಳ ಗರ್ಭಿಣಿ ಸಾವು – ಮಂಗಳೂರಿನ ಖಾಸಗಿ ಆಸ್ಪತ್ರೆ ವಿರುದ್ಧ ಕುಟುಂಬಸ್ಥರ ಆಕ್ರೋಶ!!!

ಕಡಬ:(ಡಿ.21) 13 ವರ್ಷಗಳ ಬಳಿಕ ತಾಯಿಯಾದ ಸಂತಸದಲ್ಲಿದ್ದ ನಾಲ್ಕು ತಿಂಗಳ ಗರ್ಭಿಣಿ ಸಾವನ್ನಪ್ಪಿರುವ ಘಟನೆ ಕಡಬ ತಾಲೂಕು ಎಡಮಂಗಲ ಗ್ರಾಮದ ಡೆಕ್ಕಲದಲ್ಲಿ ನಡೆದಿದೆ. ಡೆಕ್ಕಲ ದಿನೇಶ್ ಅವರ ಪತ್ನಿ ಶೀಲಾವತಿ (38) ಮೃತ ದುರ್ದೈವಿ.

ಇದನ್ನೂ ಓದಿ: ಪಾಣೆಮಂಗಳೂರು: ಘನ ವಾಹನಗಳ ಸಂಚಾರಕ್ಕೆ ತಡೆ ಹಾಕಿದ್ದರೂ ಲೆಕ್ಕಿಸದೆ ವಾಹನವನ್ನು ನುಗ್ಗಿಸಿದ ಚಾಲಕ


ದಿನೇಶ್ ಎಂಬವರನ್ನು 13 ವರ್ಷಗಳ ಹಿಂದೆ ಶೀಲಾವತಿ ಮದುವೆ ಆಗಿದ್ದರು. ಮಕ್ಕಳಾಗದ ಕಾರಣಕ್ಕೆ ಇತ್ತೀಚಿಗೆ ಚಿಕಿತ್ಸೆ ಪಡೆದ ಬಳಿಕ 4 ತಿಂಗಳ ಗರ್ಭಿಣಿ ಆಗಿದ್ದರು.

ಈ ಮಧ್ಯೆ ಅನಾರೋಗ್ಯದ ಹಿನ್ನೆಲೆ ವಾರದ ಹಿಂದೆ ತವರು ಮನೆಯಾದ ಪಂಜ ಸಮೀಪದ ಕರಿಕಳಕ್ಕೆ ಹೋಗಿ ಅಲ್ಲಿಯೇ ಇದ್ದರು. ಡಿ. 18 ರಂದು ಆರೋಗ್ಯ ಸರಿಯಿಲ್ಲ ಎಂದು ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಬಳಿಕ ಅಲ್ಲಿಯ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಗೆ ಮಂಗಳೂರಿನ ಫಾದರ್ ಮುಲ್ಲಾರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.

ಅಲ್ಲಿ ವೈದ್ಯರು ಪರೀಕ್ಷಿಸಿ ಓಳರೋಗಿಯಾಗಿ ದಾಖಲಿಸಿಕೊಂಡಿದ್ದರು. ಬಳಿಕ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಇದೀಗ ಶೀಲಾವತಿ ಸಾವಿಗೆ ವೈದ್ಯರೇ ಕಾರಣ ಎಂದು ದಿನೇಶ್ ಅವರ ತಮ್ಮ ಮೋಹನ ಎಂಬವರು ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *