Fri. Apr 4th, 2025

Bantwala: ಶಾಲಾ ವಾರ್ಷಿಕೋತ್ಸವಕ್ಕೆ ಆಗಮಿಸಿದ್ದ ಯುವತಿಯ ಮೇಲೆ ಅತ್ಯಾಚಾರ – ಕಾಮುಕ ಜಯಂತ್ ಅರೆಸ್ಟ್!!!

ಬಂಟ್ವಾಳ:(ಡಿ.22)ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಯುವತಿಯೋರ್ವಳನ್ನು ಬಲಾತ್ಕಾರವಾಗಿ ಅತ್ಯಾಚಾರ ‌ಮಾಡಿದ ಘಟನೆ ನಡೆದಿರುವ ಬಗ್ಗೆ ತಡವಾಗಿ ವರದಿಯಾಗಿದ್ದು,

ಅತ್ಯಾಚಾರ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ನೇತೃತ್ವದ ತಂಡ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ನಾವೂರ ನಿವಾಸಿ ಜಯಂತ ಎಂಬಾತ ಆರೋಪಿಯಾಗಿದ್ದು ,ಸದ್ಯ ಜೈಲುವಾಸ ಆನುಭವಿಸುತ್ತಿದ್ದಾನೆ‌. ‌

ಡಿ. 14 ರಂದು ನಾವೂರು ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ನೋಡಲು ಮನೆಯವರ ಜೊತೆ ತೆರಳಿದ್ದ ಯುವತಿಯನ್ನು ಆರೋಪಿ ಜಯಂತ ಶಾಲಾ ಕೊಠಡಿಯಲ್ಲಿ ಕೂಡಿ ಹಾಕಿ ಬಲಾತ್ಕಾರವಾಗಿ ಅತ್ಯಾಚಾರ ಮಾಡಿದ ಬಗ್ಗೆ ನೊಂದ ಯುವತಿಯ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿದ್ದಳು.

ಇದೀಗ ಗ್ರಾಮಾಂತರ ಎಸ್.ಐ.ಹರೀಶ್ ಅವರ ಪೋಲೀಸ್ ತಂಡ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,ನ್ಯಾಯಾಲಯವು ಈತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

Your email address will not be published. Required fields are marked *