ಬೆಳ್ತಂಗಡಿ:(ಡಿ.22) ಗುರುವಾಯನಕೆರೆ, ಕಾರ್ಕಳ ಮೂಡುಬಿದ್ರೆ ಕೂಡು ರಸ್ತೆಯ ಶಕ್ತಿನಗರ ಸರ್ಕಲ್ ನಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರವನ್ನು 5 ಬಾರಿ ಪ್ರತಿನಿಧಿಸಿರುವ ಬಡವರ ಪರ ಹೋರಾಟ ಮಾಡಿದ ಭ್ರಷ್ಟಾಚಾರವನ್ನು
ಇದನ್ನೂ ಓದಿ: ಕುಂದಾಪುರ: ಅಂಬರ್ ಗ್ರೀಸ್ ಮಾರಾಟ ಜಾಲದ ಕಾರ್ಯಾಚರಣೆ ವೇಳೆ FMS ಅಧಿಕಾರಿಗಳ ಮೇಲೆ ಹಲ್ಲೆ
ಕಠಿಣ ಶಬ್ದಗಳಲ್ಲಿ ವಿರೋಧಿಸುತ್ತಿದ್ದ ನೇರ ನಡೆನುಡಿಯ ನಾಯಕ ಕುವೆಟ್ಟು ಗ್ರಾಮ ಪಂಚಾಯತ್ ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವ ದಿವಂಗತ ಕೆ ವಸಂತ ಬಂಗೇರವರ ಪುತ್ಥಳಿ ಯನ್ನು ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುರುವಾಯನಕೆರೆ ಕಾರ್ಕಳ ಮೂಡುಬಿದರೆ ಕೂಡು ರಸ್ತೆಯ ಶಕ್ತಿನಗರ ಸರ್ಕಲ್ ನಲ್ಲಿ ಸ್ಥಾಪನೆ ಮಾಡುವಂತೆ
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ದಿನೇಶ್ ಗುಂಡೂರಾವ್ ರವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ , ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿಯ ಅಧ್ಯಕ್ಷರಾದ ಕೆ ಎಂ ನಾಗೇಶ್ ಕುಮಾರ್ ಗೌಡ,
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶೇಖರ್ ಕುಕ್ಕೆಡಿ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾದ ಜಯವಿಕ್ರಮ್ ಕಲ್ಲಾಪು, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನಗಳ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಸಾಲಿಯಾನ್,
ತಾಲೂಕು ಅಕ್ರಮ ಸಕ್ರಮ ಸಮಿತಿಯ ಸದಸ್ಯರಾದ ಆಯುಬ್ ಡಿ.ಕೆ., ತಾಲೂಕು ಅಸಂಘಟಿತ ಕಾರ್ಮಿಕ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ರಜಾಕ್, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷರಾದ ಡಾ. ರಾಜಾರಾಮ್ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಲಂದರ್ ಕೊಕ್ಕಡ, ಧನಂಜಯ್ ರಾವ್ ಕುವೆಟ್ಟು ಹಾಗೂ ಪ್ರಮುಖರು ಉಪಸ್ಥಿತರಿದ್ದರು.