ಉಡುಪಿ:(ಡಿ.22) ಉಡುಪಿ ನಗರದಿಂದ 13 ಕಿ.ಮಿ ದೂರದ ಪ್ರವಾಸಿತಾಣ ತಿಮ್ಮಣ್ಣ ಕುದ್ರು ದ್ವೀಪದಲ್ಲಿರುವ ರೆಸಾರ್ಟ್ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ.
ಇದನ್ನೂ ಓದಿ: ಪುತ್ತೂರು: ಉಪ ಲೋಕಾಯುಕ್ತ ವೀರಪ್ಪ.ಬಿ ಪುತ್ತೂರಿಗೆ ಭೇಟಿ
ಈ ಅವಘಡದಲ್ಲಿ ಗಮನಾರ್ಹ ಪ್ರಮಾಣದಲ್ಲಿ ನಷ್ಟವಾಗಿದೆ. ಏರ್ ಕಂಡಿಷನರ್’ಗೆ ಬೆಂಕಿ ಹತ್ತಿಕೊಂಡು ಬಳಿಕ ಬಿದಿರಿನಿಂದ ನಿರ್ಮಿಸಲ್ಪಟ್ಟ ಮಹಡಿ ಮತ್ತು
ಇತರ ಅಲಂಕಾರಿಕ ಭಾಗಗಳಿಗೆ ಬೆಂಕಿ ಹಬ್ಬಿದೆ ಎನ್ನಲಾಗಿದೆ. ಊರಿನವರೇ ಮುತುವರ್ಜಿ ವಹಿಸಿ ಪಕ್ಕದಲ್ಲಿ ಹರಿಯುವ ನದಿಯಿಂದ ನೀರು ಹಾಕಿ ಬೆಂಕಿ ನಂದಿಸಿದ್ದಾರೆ.