Fri. Dec 27th, 2024

Ujire: ಉಜಿರೆಯ ಬೆನಕ ಹೆಲ್ತ್ ಸೆಂಟರ್ ನಲ್ಲಿ ಉಜಿರೆ ಪರಿಸರದ ರಿಕ್ಷಾ ಚಾಲಕರು, ಮಾಲಕರು ಮತ್ತು ಜೀಪು ಮಾಲಕರು ಚಾಲಕರಿಗಾಗಿ ವಿಶೇಷವಾದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಉಜಿರೆ:(ಡಿ.22) NABH ರಾಷ್ಟ್ರೀಯ ಪುರಸ್ಕೃತ ಉಜಿರೆಯ ಬೆನಕ ಹೆಲ್ತ್ ಸೆಂಟರ್ ನಲ್ಲಿ ಉಜಿರೆ ಪರಿಸರದ ರಿಕ್ಷಾ ಚಾಲಕರು, ಮಾಲಕರು ಮತ್ತು ಜೀಪು ಮಾಲಕರು ಚಾಲಕರಿಗಾಗಿ ವಿಶೇಷವಾದ ಉಚಿತ ಆರೋಗ್ಯ ತಪಾಸಣಾ ಶಿಬಿರ ಇತ್ತೀಚಿಗೆ ಬೆನಕ ಆಸ್ಪತ್ರೆಯ ಆವರಣದಲ್ಲಿ ಜರುಗಿತು.

ಇದನ್ನೂ ಓದಿ: ಬೆಳ್ತಂಗಡಿ: ಡಿ. ಕೆ.ಆರ್.ಡಿ.ಎಸ್ (ರಿ.)ಬೆಳ್ತಂಗಡಿ – ನವಜೀವನ ಆರೈಕೆ ಹಾಗೂ ಬೆಂಬಲ ಕಾರ್ಯಕ್ರಮ ಮತ್ತು ಕ್ರಿಸ್ಮಸ್ ಆಚರಣೆ

ಕಾರ್ಯಕ್ರಮದ ಉದ್ಘಾಟನೆ ಮಾಡಿದ ಬೆನಕ ಹೆಲ್ತ್ ಸೆಂಟರ್ ನ ವೈದ್ಯಕೀಯ ನಿರ್ದೇಶಕರಾದ ಡಾ. ಗೋಪಾಲಕೃಷ್ಣ.ಕೆ ರವರು ಮಾತಾನಾಡುತ್ತ ರಿಕ್ಷಾ ಮತ್ತು ಜೀಪು ಚಾಲಕರು ಸಮಾಜದ ಆಸ್ತಿಯಾಗಿದ್ದಾರೆ. ಮಳೆ, ಬಿಸಿಲು, ಚಳಿಯನ್ನು ಲೆಕ್ಕಿಸದೇ ತಮ್ಮ ಸೇವೆಯನ್ನು ಸಮಾಜಕ್ಕೆ ನೀಡುತ್ತಿದ್ದಾರೆ.

ಬಹಳಷ್ಟು ಬಾರಿ ಅನಾರೋಗ್ಯ ಪೀಡಿತರನ್ನು ಕೂಡಲೇ ತಮ್ಮ ವಾಹನದಲ್ಲಿ ಹತ್ತಿರದ ವೈದ್ಯಕೀಯ ಕೇಂದ್ರಗಳಿಗೆ, ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಜೀವ ಉಳಿಸುವ ಮಹತ್ಕಾರ್ಯ ಮಾಡುತ್ತಿದ್ದಾರೆ. ಅವರ ಅರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ . ಅದಕ್ಕಾಗಿ ದಿನಾಂಕ 20.12.2024 ಮತ್ತು 21.12.2024 ರಂದು ಅವರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಮ್ಮ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿರುತ್ತೇವೆ.

ಪರಿಸರದ ರಿಕ್ಷಾ ಮತ್ತು ಜೀಪು ಚಾಲಕರು, ಮ್ಹಾಲಕರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಶ್ರೀ ಕೃಷ್ಣ ಬೆಳಾಲು ಗೌರವಾಧ್ಯಕ್ಷರು ವಾಹನ ಮಾಲಕರು ಮತ್ತು ಚಾಲಕರ ಸಂಘ ಬೆಳಾಲು, ಶ್ರೀ ರಮೇಶ್
“ಬೊಳ್ಳಿ” ಉಪಾಧ್ಯಕ್ಷರು, ರಿಕ್ಷಾ ಮಾಲಕರು ಮತ್ತು ಚಾಲಕರ ಸಂಘ, ಉಜಿರೆ ವಲಯ ಮತ್ತು ಶ್ರೀ ಲಿಂಗಪ್ಪ ನಾಯ್ಕ್, ಕಾರ್ಯದರ್ಶಿ ರಿಕ್ಷಾ ಮಾಲಕರು ಮತ್ತು ಚಾಲಕರ ಸಂಘ, ಉಜಿರೆ ವಲಯ ಇವರುಗಳು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಡಾ. ಭಾರತಿ ಜಿ ಕೆ ಅವರು ಧನ್ಯವಾದ ಅರ್ಪಿಸಿದರೆ, ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್ ಜಿ ಭಟ್ ಇವರು ಸ್ವಾಗತಿಸಿ, ನಿರೂಪಿಸಿದರು . ಈ ಶಿಬಿರದಲ್ಲಿ ಉಚಿತವಾಗಿ ಇ.ಸಿ.ಜಿ , ರಕ್ತದೊತ್ತಡ ಮತ್ತು ಮಧುಮೇಹ ತಪಾಸಣಾ ನಡೆಸಿ ಸೂಕ್ತ ಸೂಚನೆ ನೀಡಲಾಯಿತು.

ಹಲವಾರು ರಿಕ್ಷಾ ಮತ್ತು ಜೀಪು ಚಾಲಕರು ಮತ್ತು ಮಾಲಕರು ಈ ವಿಶೇಷ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು
ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *