Chaitra Achar:(ಡಿ.23) ಸಪ್ತ ಸಾಗರದಾಚೆ ಎಲ್ಲೋ ಸುರಭಿ ಅಲಿಯಾಸ್ ಚೈತ್ರಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಕೇಳಿ ಉತ್ತರ ಕೊಡುತ್ತೇನೆ ಅಂದಿದ್ರು. ಚೈತ್ರಾ ಪ್ರಶ್ನೆ ಕೇಳಿ ಎನ್ನುತ್ತಿದ್ದಂತೆ ಬ್ಯಾಡ್ ಬಾಯ್ಸ್ ಕೇಳಬಾರದ್ದನ್ನೆಲ್ಲಾ ಕೇಳಿದ್ದಾರೆ. ಅದಕ್ಕೆ ಚೈತ್ರಾ ಬೋಲ್ಡ್ ಆಗೇ ಉತ್ತರ ಕೊಟ್ಟಿದ್ದಾರೆ.
ಇದನ್ನೂ ಓದಿ: ತುಂಬೆ: ಸಿನಿಮಾ ನೋಡಲು ಹೋಗಿ ಹಿಂತಿರುಗುತ್ತಿದ್ದ ಯುವತಿಯರಿಗೆ “ಬರ್ತೀಯಾ” ಎಂದು ಕೇಳಿದ ಕಾಮಪಿಶಾಚಿಗಳು!!
ಅಧಿಕ ಪ್ರಸಂಗತನದ ಪ್ರಶ್ನೆಗಳನ್ನು ಕೇಳಿದ್ರೆ, ಕೆಟ್ಟ ಕಮೆಂಟ್‌ಗಳನ್ನು ಹಾಕಿದರೆ ನಟಿ ಚೈತ್ರಾ ಅವರು ಮುಖಕ್ಕೆ ಹೊಡೆದಂತೆ ತಿರುಗೇಟು ಕೊಡ್ತಾರೆ. ಅಶ್ಲೀಲ ಕಮೆಂಟ್ ಹಾಕಿದವರಿಗೆ ಮುಲಾಜಿಲ್ಲದೆ ಉತ್ತರ ಕೊಡ್ತಾರೆ. ಇದೀಗ ಅಂಥ ಒಂದು ಕಾರಣಕ್ಕೇ ಚೈತ್ರಾ ಅವರು ಸುದ್ದಿಯಾಗಿದ್ದಾರೆ.
ಕನ್ಯತ್ವ ಹೇಗೆ ಕಳೆದುಕೊಂಡಿರಿ..?
ಚೈತ್ರಾ ಪ್ರಶ್ನೆ ಕೇಳಿ ಎನ್ನುತ್ತಿದ್ದಂತೆ ಒಬ್ಬ ಪುಡಂಗಿ ನೀವು ಕನ್ಯತ್ವವನ್ನು ಹೇಗೆ ಕಳೆದುಕೊಂಡಿರಿ, ಅನುಭವ ಹೇಗಿತ್ತು ಎಂದು ಪ್ರಶ್ನೆ ಕೇಳಿದ್ದ. ಅದಕ್ಕೂ ಕೂಡ ಚೈತ್ರಾ ಆಚಾರ್ ಅವರು ತೀಕ್ಷ್ಣವಾಗಿ ಉತ್ತರ ಕೊಟ್ಟಿದ್ದಾರೆ. “ನೀವು ನಿಮ್ಮ ಅಮ್ಮ, ಸಹೋದರಿ ಅಥವಾ ನಿಮ್ಮ ಮನೆಯಲ್ಲಿರುವ ಮಹಿಳೆಯರ ಬಳಿ ಈ ಪ್ರಶ್ನೆ ಕೇಳಿ. ಅರ್ಥವಾಗದೆ ಇದ್ದರೆ, ಅದನ್ನು ಲೈವ್‌ನಲ್ಲಿ ತೋರಿಸೋಕೆ ಹೇಳಿ. ಅದು ಬಿಟ್ಟು ಸೋಷಿಯಲ್ ಮೀಡಿಯಾದಲ್ಲಿ ಕಂಡವರ ಬಳಿ ಈ ಪ್ರಶ್ನೆಗಳನ್ನು ಕೇಳಬೇಡ”ʼ ಎಂದು ಹೇಳಿದ್ದಾರೆ.
ಅಲ್ಲದೆ ನಿಮಗೆ ಮದುವೆ ಆಗಿದ್ಯಾ ಅಂತ ಕೇಳಿದವರಿಗೆ ಚೈತ್ರಾ ನನಗೆ ಒಂದು ಮದುವೆ, ಮೂರು ಡಿವೋರ್ಸ್ ಆಗಿದೆ. ಈಗಲೂ ಲೆಕ್ಕಾ ಹಾಕ್ತಿದ್ದೇನೆ ಎಂದಿದ್ದಾರೆ. ಮತ್ತೊಬ್ಬ ಪಡ್ಡೆ ನೀವು ಕೆಲಸ ಪಡೆಯೋದಕ್ಕೆ ನಿಮ್ಮ ಲೈಂಗಿಕಕಥೆ ಬಳಸಿದ್ದೀರಾ ಅಂತ ಮರ್ಯಾದೆ ಬಿಟ್ಟು ಕೇಳಿದ್ದಾನೆ. ಅದಕ್ಕೆ ಉತ್ತರಿಸಿದ ಚೈತ್ರಾ, “ಅವಕಾಶಗಳಿಗಾಗಿ ನಾನೆಂದಿಗೂ ಅಂಥ ಕೀಳುಮಟ್ಟಕ್ಕೆ ಇಳಿದಿಲ್ಲ, ಇಳಿಯುವುದೂ ಇಲ್ಲ. ನನ್ನಲ್ಲಿ ಪ್ರತಿಭೆಯಿದೆ. ಅದೇ ನನ್ನನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆʼ ಎಂದು ಹೇಳಿದ್ದಾರೆ.