ಕೇರಳ:(ಡಿ.23) ಶಬರಿಮಲೆಯಲ್ಲಿ ಮಂಡಲಪೂಜೆ ಉತ್ಸವಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಭಕ್ತರ ಪ್ರವಾಹವೇ ಹರಿದು ಬರತೊಡಗಿದೆ. ಭದ್ರತೆಗಾಗಿ ಹೆಚ್ಚುವರಿ ಪೊಲೀಸರನ್ನು ನೇಮಿಸಲಾಗಿದ್ದು, ಎಲ್ಲೆಡೆ ಬಿಗು ಪೊಲೀಸ್ ನಿಯಂತ್ರಣ ಏರ್ಪಡಿಸಲಾಗಿದೆ.
ಇದನ್ನೂ ಓದಿ: ಪುಣೆ: ಫುಟ್ ಪಾತ್ ನಲ್ಲಿ ಮಲಗಿದ್ದವರ ಮೇಲೆ ಹರಿದ ಟ್ರಕ್
ಭಕ್ತರ ಪ್ರವಾಹಕ್ಕೆ ಹೊಂದಿಕೊಂಡು ವರ್ಚುವಲ್ ಕ್ಕೂ ಸಂಖ್ಯೆಗೂ ಮುಜರಾಯಿ ಮಂಡಳಿ ಕತ್ತರಿ ಹಾಕಿದ್ದು, ಸ್ಪಾಟ್ ಬುಕ್ಕಿಂಗ್ ಸೌಕರ್ಯವನ್ನು ತಾತ್ಕಾಲಿಕವಾಗಿ ರದ್ದುಪಡಿಸಲು ತೀರ್ಮಾನಿಸಿದೆ.
ಇದರಂತೆ ಡಿ.25ರ ತನಕ ವರ್ಚುವಲ್ ಕ್ಯೂ ಮೂಲಕ ಪ್ರತಿದಿನ 54 ಸಾವಿರ ಭಕ್ತರಿಗೆ ದರ್ಶನ ಏರ್ಪಡಿಸಲಾಗುವುದು. ಸಂಖ್ಯೆಯನ್ನು 50 ಸಾವಿರಕ್ಕೆ ಸೀಮಿತಗೊಳಿಸುವ ತೀರ್ಮಾನವನ್ನೂ ಮಂಡಳಿ ಕೈಗೊಂಡಿದೆ.
ಪ್ರಸ್ತುತ ತೀರ್ಥಾಟನಾ ಋತು ಆರಂಭಗೊಂಡ ಬಳಿಕ ಡಿ.20ರಂದು ಅತಿ ಹೆಚ್ಚು, ಅಂದರೆ 96,853 ಭಕ್ತರು ಶಬರಿಮಲೆ ದರ್ಶನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯನ್ನು ಪರಿಗಣಿಸಿ ಇನ್ನಷ್ಟು ಹೆಚ್ಚಿನ ನಿಯಂತ್ರಣ ಹೇರಲು ಮಂಡಳಿ ತೀರ್ಮಾನಿಸಿದೆ.