ಮಂಗಳೂರು :(ಡಿ.23) ಮಾಜಿ ಶಾಸಕ ಮೊಯಿದ್ದೀನ್ ಬಾವಾ ಅವರ ಸಹೋದರ, ಮಿಸ್ಟಾ ಶಿಕ್ಷಣ ಸಂಸ್ಥೆ ಚೇರ್ಮನ್ ಮುಮ್ತಾಜ್ ಅಲಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚೋದನೆ ನೀಡಿದ ಆರೋಪಿಗಳ ಬಂಧಿಸಲ್ಪಟ್ಟಿರುವ ಜಾಮೀನು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜ. 9ರ ಮುಂದೂಡಿದೆ.
ಇದನ್ನೂ ಓದಿ: Chaitra Achar: “ಆಸ್ಕ್ ಮಿ ಎನಿಥಿಂಗ್” ಎಂದ ಚೈತ್ರಾ ಆಚಾರ್
ಇದರಿಂದಾಗಿ ನ್ಯಾಯಾಂಗ ಬಂಧನ ಆಯೇಷಾ, ಶೋಹೆಬ್, ಸತ್ತಾರ್ ಸಹಿತ ಇತರರು ಹಣಕ್ಕಾಗಿ ಹನಿಟ್ರ್ಯಾಪ್ ಮಾಡಿದ್ದರು ಎಂದು ಕುಟುಂಬಸ್ಥರು ಕಾವೂರು ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿತ್ತು.
60 ದಿನಗಳ ಒಳಗಾಗಿ ಪೊಲೀಸರು ಚಾರ್ಜ್ ಶೀಟ್ ಹಾಕದೆ ಇರುವುದರಿಂದ ಜಾಮೀನು ನೀಡಲು ಅವಕಾಶವಿದ್ದು ಆರೋಪಿ ಪರ ವಕೀಲರು ಈ ಕುರಿತು ವಾದಿಸಿದ್ದರು. ಇದನ್ನು ಪರಿಗಣಿಸಿ ಸ್ಥಳೀಯ ಹಾಗೂ ಹೈಕೋರ್ಟ್ ಜಾಮೀನು ನೀಡಲು ನಿರ್ದೇಶಿಸಿತ್ತು.
ಆದರೆ ಮುಮ್ತಾಜ್ ಅಲಿ ಕುಟುಂಬಸ್ಥರ ಪರ ವಾದಿಸಿರುವ ಪಿ.ಪಿ. ಹೆಗ್ಡೆ ಅವರು ಭಾರತೀಯ ನ್ಯಾಯ ಸಂಹಿತೆ ನೂತನ ಕಾಯ್ದೆಯ ಅನ್ವಯ 90 ದಿನಗಳ ಕಾಲಾವಕಾಶ ಇದೆ.
ಹೀಗಾಗಿ ಮಾನ್ಯ ಮಾಡಬಾರದು ಎಂದು ವಾದಿಸಿದ್ದು, ಸುಪ್ರೀಂ ಕೋರ್ಟ್ ಆರೋಪಿಗಳ ಜಾಮೀನು ಅರ್ಜಿ ವಾದವನ್ನು ಜ. 9ರ ವರೆಗೆ ಮುಂದೂಡಿ ಭಾರತೀಯ ನ್ಯಾಯ ಸಂಹಿತೆಯ ಹೊಸ ಕಾನೂನಿನಂತೆ ನೀಡಬೇಕೇ ಅಥವಾ ಈ ಹಿಂದಿನ ಕಾನೂನು ಮಾನ್ಯವೇ ಎಂಬ ಬಗ್ಗೆಯೂ ವಿಚಾರಣೆ ನಡೆಸಲಿದೆ.