Sat. Dec 28th, 2024

Mangalore: ಕ್ರಿಸ್‌ಮಸ್‌ ಹಾಗೂ ಹೊಸ ವರ್ಷದ ಹಿನ್ನೆಲೆ ಬೆಂಗಳೂರು ನಡುವೆ ಮಂಗಳೂರು ವಿಶೇಷ ಎಕ್ಸ್‌ಪ್ರೆಸ್‌ ರೈಲು

ಮಂಗಳೂರು:(ಡಿ.23) ಕ್ರಿಸ್‌ಮಸ್‌ ಹಾಗೂ ಹೊಸ ವರ್ಷದ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು ನೈಋತ್ಯ ರೈಲ್ವೆಯಿಂದ ಯಶವಂತಪುರ – ಮಂಗಳೂರು ಜಂಕ್ಷನ್ – ಯಶವಂತಪುರ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಾಟ ನಡೆಸಲಿದೆ.

ಇದನ್ನೂ ಓದಿ: ಬೆಂಗಳೂರು: ಬೆಂಗಳೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ

ನಂ.06505 ಯಶವಂತಪುರ ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್‌ ವಿಶೇಷ ರೈಲು ಡಿ.23 ಮತ್ತು 27ರಂದು ರಾತ್ರಿ 11.55ಕ್ಕೆ ಯಶವಂತಪುರದಿಂದ ಹೊರಡಲಿದೆ. 1.03ಕ್ಕೆ ಕುಣಿಗಲ್, 2.18ಕ್ಕೆ ಚನ್ನರಾಯಪಟ್ಟಣ, 3 3.508 क, 4.508 ಸಕಲೇಶಪುರ, 8.25ಕ್ಕೆ ಸುಬ್ರಹ್ಮಣ್ಯ ರೋಡ್. 9.23ಕ್ಕೆ ಕಬಕ ಪುತ್ತೂರು, 9.53ಕ್ಕೆ ಬಂಟ್ವಾಳ, 11.೧೦ ಪಡೀಲ್ 11.45 ಜಂಕ್ಷನ್ ತಲುಲಿದೆ.

ನಂ.06506 ಮಂಗಳೂರು ಜಂಕ್ಷನ್- ಯಶವಂತಪುರ ಎಕ್ಸ್‌ಪ್ರೆಸ್ ವಿಶೇಷ ರೈಲು, ಡಿ.24 ಮತ್ತು 28ರಂದು (ಗುರುವಾರ ಮತ್ತು ಶನಿವಾರ) ಮಧ್ಯಾಹ್ನ 1 ಗಂಟೆಗೆ ಮಂಗಳೂರು ಜಂಕ್ಷನ್‌ನಿಂದ ಹೊಡಲಿದ್ದು, 1.30ಕ್ಕೆ ಪಡೀಲ್, 1.28ಕ್ಕೆ ಬಂಟ್ವಾಳ, 1.58ಕ್ಕೆ ಕಬಕ ಪುತ್ತೂರು, 2.35ಕ್ಕೆ ಸುಬ್ರಹ್ಮಣ್ಯ ರೋಡ್, ಸಂಜೆ 5.05ಕ್ಕೆ ಸಕಲೇಶಪುರ, 6 ಗಂಟೆಗೆ ಹಾಸನ, 6.38ಕ್ಕೆ ಚನ್ನರಾಯಪಟ್ಟಣ, 7.43ಕ್ಕೆ ಕುಣಿಗಲ್, ರಾತ್ರಿ 10.30ಕ್ಕೆ ಯಶವಂತಪುರ ತಲುಪಲಿದೆ.

Leave a Reply

Your email address will not be published. Required fields are marked *