ಉತ್ತರ ಪ್ರದೇಶ:(ಡಿ.23) ಈಗ ತಾನೇ ವಯಸ್ಸಿಗೆ ಬಂದಿರುವ 18ರ ಯುವಕನ ಜೊತೆಗೆ ತನಗಿಂತ ಮೂರು ಪಟ್ಟು ದೊಡ್ಡವಳಾಗಿರುವ ಮಹಿಳೆಯ ಜೊತೆಗೆ ಪ್ರೀತಿ ಚಿಗುರಾಗಿರುವ ವಿಶೇಷ ಘಟನೆ ನಡೆದಿದೆ.
ಇದನ್ನೂ ಓದಿ : ಹೈದರಾಬಾದ್ : ನಟ ಅಲ್ಲು ಅರ್ಜುನ್ ನಿವಾಸದ ಬಳಿ ಪುಂಡಾಟ
ಪ್ರೀತಿಗೆ ಕಣ್ಣಿಲ್ಲ, ಜಾತಿ ಧರ್ಮ ಯಾವುದರ ಬೇಧ ಭಾವವಿಲ್ಲ ಎಂದು ಕೇಳಿದ್ದೇವೆ. ಆದ್ರೆ ಇದನ್ನೆಲ್ಲಾ ಮೀರಿದ ಇದೊಂದು ವಿಚಿತ್ರ ಪ್ರೇಮ ಅನ್ನಬಹುದು. ಯಾಕೆಂದರೆ ಇಲ್ಲಿ 18ರ ಯುವಕ ತನಗಿಂತ ಮೂರು ಪಟ್ಟು ದೊಡ್ಡವಳಾಗಿರುವ ಆ ಮಹಿಳೆಯನ್ನು ಪ್ರೀತಿಸುತ್ತಿರುವುದಾಗಿದೆ.
ಮಾಹಿತಿ ಪ್ರಕಾರ, ಮಹಿಳೆಗೆ ನಾಲ್ಕು ಮಕ್ಕಳಿದ್ದು, ಹಿರಿಯ ಮಗಳಿಗೆ ಮದುವೆಯು ಕೂಡ ಆಗಿದೆ. ಕುಕ್ಕೆ ಪ್ರದೇಶದ ಗ್ರಾಮವೊಂದರಲ್ಲಿ ವಾಸಿಸುತ್ತಿರುವ 51 ವರ್ಷದ ಮಹಿಳೆ ತನ್ನ ಗ್ರಾಮದಿಂದ ಐದು ಕಿಲೋಮೀಟರ್ ದೂರದಲ್ಲಿರುವ ಇನ್ನೊಂದು ಗ್ರಾಮದ 18 ವರ್ಷದ ಹುಡುಗನೊಂದಿಗಿನ ಪರಿಚಯ ಕ್ರಮೇಣ ಇವರಿಬ್ಬರ ಪರಿಚಯ ಪ್ರೀತಿಗೆ ತಿರುಗಿತು.
ಈ ಯುವಕ ಹಾಗೂ ಮಧ್ಯ ವಯಸ್ಕ ಜೋಡಿ ಹರೆಯದ ಯುವಕರಂತೆ ಆಗಾಗ ರಹಸ್ಯವಾಗಿ ಭೇಟಿಯಾಗಲು ಆರಂಭಿಸಿದ್ದಾರೆ. ಆದ್ರೆ ತಮ್ಮ ತಾಯಿ ಹುಡುಗನನ್ನು ಪ್ರೀತಿ ಮಾಡುತ್ತಿರುವ ವಿಚಾರ ಗೊತ್ತಾಗಿ ಎಲ್ಲ ನಾಲ್ಕು ಮಕ್ಕಳು ತಾಯಿಯ ವಿರುದ್ದ ತಿರುಗಿ ಬಿದ್ದಿದ್ದಾರೆ. ಬುದ್ದಿ ಹೇಳಿದ್ದಾರೆ. ಆದ್ರೆ ಆಕೆ ಮಾತ್ರ ಮಕ್ಕಳ ವಿರೋಧವನ್ನು ಲೆಕ್ಕಿಸಿಲ್ಲ. ತನ್ನ ಸಂಬಂಧವನ್ನು ಮುಂದುವರಿಸಿದ್ದಾಳೆ.
ಅಷ್ಟೇ ಅಲ್ಲದೇ ಇಬ್ಬರೂ ಊರ ಹೊರಗಿನ ಸ್ಥಳದಲ್ಲಿ ಭೇಟಿ ಮಾಡುತ್ತಿದ್ದರು. ಕೊನೆಗೆ ಈ ಊರಿನವರನ್ನು ಎದುರಿಸಲಾಗದೆ ಒಂದು ದಿನ, ಮಹಿಳೆ ತನ್ನ ಯುವ ಪ್ರೇಮಿಯೊಂದಿಗೆ ಓಡಿಹೋದಳು. ಆದ್ರೆ ತಾಯಿ ಓಡಿ ಹೋಗಿದ್ದಾಳೆ ಎಂಬ ಸುದ್ದಿ ಗೊತ್ತಾಗಿ ಆಕೆಯ ಹಿರಿಯ ಮಗಳು ಪೊಲೀಸರ ನೆರವಿನಿಂದ ಹುಡುಕಾಟ ಆರಂಭಿಸಿದಳು.
ಈ ಘಟನೆ ಉತ್ತರ ಪ್ರದೇಶದ ಸಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮಗಳ ದೂರಿನ ಆಧಾರದ ಮೇಲೆ ಪೊಲೀಸರು ಮಹಿಳೆ ಮತ್ತು ಆಕೆಯ ಯುವ ಪ್ರಿಯಕರನ ಹುಡುಕಾಡಿ, ಕೊನೆಗೂ ಪತ್ತೆಹಚ್ಚಿದರು. ಇಬ್ಬರನ್ನು ಠಾಣೆಯ ಕರೆತಂದರು. ಕೊನೆಗೆ ಇಬ್ಬರನ್ನು ಅವರವರ ಕುಟುಂಬದವರಿಗೆ ಒಪ್ಪಿಸಲಾಗಿದೆ.