ಮೇಷ ರಾಶಿ: ನಿಮ್ಮ ಕಾರ್ಯವೇ ಇಂದು ಎಲ್ಲವನ್ನೂ ಹೇಳಿಬಿಡುವುದು. ನೀವು ಹಣಕಾಸಿನ ವ್ಯವಹಾರದಲ್ಲಿ ಪಾರದರ್ಶಕತೆಯನ್ನು ಇಟ್ಟುಕೊಳ್ಳಬೇಕಾಗುವುದು. ಭೂಮಿಗೆ ಸಂಬಂಧಿಸಿದ ವಿಚಾರಗಳನ್ನು ಇತ್ಯರ್ಥ ಮಾಡಿಕೊಳ್ಳುವುದು ಉಚಿತ. ಉನ್ನತ ವಿದ್ಯಾಭ್ಯಾಸದ ಪ್ರಯುಕ್ತ ಹೊರಗಡೆ ಇರಲಿರುವಿರಿ. ನಿಮ್ಮ ಕಾರ್ಯವು ಆಗಬೇಕಾದರೆ ಓಡಾಟ ಅನಿವಾರ್ಯವಾಗಲಿದೆ. ಅನಾರೋಗ್ಯದ ನಡುವೆಯೂ ಉತ್ಸಾಹದಿಂದ ಇರುವಿರಿ. ಶತ್ರುಗಳ ಮುಖಾಮುಖಿ ಭೇಟಿಯ ಸಂದರ್ಭವು ಬರುವುದು.
ವೃಷಭ ರಾಶಿ: ಎಲ್ಲವನ್ನೂ ಕಳೆದುಕೊಳ್ಳುವ ಬದಲು ಅಲ್ಪವಾದರೂ ಉಳಿದುಕೊಳ್ಳಲಿ ಎನ್ನುವರು ಸಮಯೋಚಿತ ನಿರ್ಧಾರವೇ ಸರಿ. ಆಕಸ್ಮಿಕವಾಗಿ ಆರೋಗ್ಯವು ಹದ ತಪ್ಪಬಹುದು. ವಿದೇಶದ ವ್ಯವಹಾರದಲ್ಲಿ ಪಾಲುದಾರಿಕೆ ಇರಲಿದೆ. ವೃತ್ತಿಯನ್ನು ಹೊರತುಪಡಿಸಿದ ಅವಕಾಶಗಳು ನಿಮ್ಮನ್ನು ಹುಡುಕಿ ಬರಬಹುದು. ದಾಂಪತ್ಯದ ಒಳ ಜಗಳವು ಇಂದು ವ್ಯಕ್ತವಾಗಬಹುದು. ನಿಮ್ಮನ್ನು ನಂಬಿದವರಿಗೆ ಸಹಾಯ ಮಾಡಲಾಗದು. ಉತ್ತಮ ಸಮಯದ ನಿರೀಕ್ಷೆಯಲ್ಲಿ ಸಮಾಧಾನ ಇರುವುದು.
ಮಿಥುನ ರಾಶಿ: ನಿಮ್ಮ ಹಸ್ತಕ್ಷೇಪವು ಆಪ್ತರಾದರೂ ಹಿಡಿಸದು. ಇಂದು ನಿರುಪಯೋಗಿ ವಸ್ತುಗಳನ್ನು ಅನ್ಯರಿಗೆ ಫಲಾಪೇಕ್ಷೆ ಇಲ್ಲದೆ ಕೊಡಿ. ನಂಬಿಕೆಯಲ್ಲಿ ದ್ರೋಹವಾಗಿದ್ದು ಯಾರನ್ನು ನಂಬಬೇಕು ಎನ್ನುವ ಗೊಂದಲ ಕಾಣಿಸುವುದು. ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆಯನ್ನು ಆಸೆ ಅತಿಯಾಗುವುದು. ವೈಯಕ್ತಿಕ ಕೆಲಸಗಳು ಬಹಳಷ್ಟು ಇದ್ದು, ಮಾಡಲು ಸಮಯ ಸಾಲದು. ಮಿತ್ರರ ಸಹಾಯದಿಂದ ನಿಮಗೆ ಧನ ಸಹಾಯವು ಸಿಗಬಹುದು. ಸಾರ್ವಜನಿಕವಾಗಿ ಯಾರಾದರೂ ನಿಮ್ಮನ್ನು ಅವಮಾನ ಮಾಡುವ ಸಾಧ್ಯತೆ ಇದೆ.
ಕರ್ಕಾಟಕ ರಾಶಿ: ನಿಮ್ಮ ದೈಹಿಕ ಸಮಸ್ಯೆಯನ್ನು ಮುಚ್ಚಿಟ್ಟು ಪ್ರಯೋಜನವಾಗದು. ಆಕಸ್ಮಿಕ ಧನಪ್ರಾಪ್ತಿಯಿಂದ ಹರ್ಷಗೊಳ್ಳುವಿರಿ. ಶ್ರೇಷ್ಠ ವ್ಯಕ್ತಿಗಳ ಸಹವಾಸವು ನಿಮಗೆ ಸಿಗಲಿದೆ. ವಿದ್ಯಾರ್ಥಿಗಳು ಯಾರ ಬೆಂಬಲಕ್ಕೂ ಕಾಯದೇ ನಿಮ್ಮ ಪ್ರತಿಭೆಯ ಪ್ರದರ್ಶನಕ್ಕೆ ಮುನ್ನುಗ್ಗುವುದು ಸೂಕ್ತ. ನಿಮಗೆ ಇಷ್ಟವಾದ ವಿಚಾರವನ್ನು ತಕ್ಷಣ ಪಡೆಯುವಿರಿ. ಉದ್ಯೋಗವಿಲ್ಲವೆಂಬುದು ನಿಮಗೆ ಅವಮಾನದ ಸಂಗತಿಯಾಗಲಿದೆ. ಸಿಕ್ಕ ಅವಕಾಶವನ್ನು ಸದ್ಯ ಬಳಸಿಕೊಳ್ಳಿ. ನಿಮ್ಮ ನಕಾರಾತ್ಮಕ ಆಲೋಚನೆಗಳಿಂದ ಕುಟುಂಬದ ಆಲೋಚನೆಯನ್ನು ಕೆಡಿಸುವಿರಿ.
ಸಿಂಹ ರಾಶಿ: ನಿಮ್ಮ ಯೋಜನೆಯ ಗುರಿ ಬದಲಾಗಬಹುದು. ನಿಮ್ಮ ಬಂಧುಗಳ ಕಡೆಯಿಂದ ವಿವಾಹವು ಏರ್ಪಡಬಹುದು. ಅಮೂಲ್ಯ ವಸ್ತುಗಳನ್ನು ಖರೀದಿಸುವುದು ಕಷ್ಟವಾದರೂ ಮಾಡುವಿರಿ. ಪಾಲುದಾರಿಕೆಯಲ್ಲಿ ಭೂ ಸಂಬಂಧದ ಕಾರ್ಯದಿಂದ ಲಾಭವಾಗಲಿದೆ. ಕಾರ್ಯದ ಒತ್ತಡವನ್ನು ಸಹಿಸಲು ಅಸಾಧ್ಯವೆನಿಸುವುದು. ಕಛೇರಿಯಲ್ಲಿ ನಾನಾ ಕಡೆಗಳಿಂದ ಒತ್ತಡ ಬರಬಹುದು. ನಿಮ್ಮ ಸಾಮರ್ಥ್ಯಕ್ಕೆ ಕೊಟ್ಟ ಜವಾಬ್ದಾರಿಯು ಸಣ್ಣದಾಗಿರುವುದು. ನಿಮ್ಮ ಬಂಧುಗಳ ಸಹಾಯದಿಂದ ವಿವಾಹದ ಮಾತುಕತೆಯು ಘಟಿಸುವುದು. ಪರಿಶ್ರಮಕ್ಕೆ ತಕ್ಕ ಫಲವನ್ನೂ ನೀವು ಅಪೇಕ್ಷಿಸಿ ಪಡೆದುಕೊಳ್ಳುವಿರಿ.
ಕನ್ಯಾ ರಾಶಿ; ಇಂದು ನಿಮ್ಮ ಉತ್ಸಾಹಕ್ಕೆ ಯಾರಾದರೂ ತಣ್ಣೀರು ಹಾಕಬಹುದು. ನಿಮ್ಮ ಉದ್ಯಮದಲ್ಲಿ ಆದ ನಷ್ಟದಿಂದ ಮನಸಿನೊಳಗೆ ಸಂಕಟಪಡುವಿರಿ. ನಿಂತ ಕಾರ್ಯಕ್ಕೆ ಚಾಲನೆ ನೀಡುವಿರಿ. ದಾಂಪತ್ಯವು ಪರಸ್ಪರ ಸೌಹಾರ್ದದ ಮಾತುಗಳಿಂದ ನೆಮ್ಮದಿ ಸಿಗುವುದು. ಮಕ್ಕಳ ವಿಚಾರವಾಗಿ ಅನವಶ್ಯಕ ಖರ್ಚು ಮಾಡುವುದು ಬೇಡ. ಅವಶ್ಯಕತೆಯನ್ನು ನೋಡಿ. ಅನಿಶ್ಚಿತ ಕೆಲಸದಲ್ಲಿ ಆದಾಯವನ್ನು ಹೆಚ್ಚು ಪಡೆಯುವಿರಿ. ಸರ್ಕಾರಿ ಕೆಲಸಗಳು ಒತ್ತಡದ ಕಾರಣಕ್ಕೆ ಮುಂದುವರಿಯುವುದು. ನೀವು ಮೌನದಿಂದ ಇದ್ದರೆ ಒಪ್ಪಿಗೆ ಕೊಟ್ಟಿದ್ದೀರಿ ಎಂದಾಗುವುದು. ಸಮಯಕ್ಕೆ ಬೆಲೆ ಕೊಟ್ಟು ಎಲ್ಲವನ್ನೂ ಸಕಾಲಕ್ಕೆ ಮುಗಿಸುವುದು ಉತ್ತಮ.
ತುಲಾ ರಾಶಿ: ಇಂದು ನಿಮಗೆ ಪೂರೈಕೆಯಲ್ಲಿ ಹಿನ್ನಡೆ ಅಥವಾ ಅಧಿಕ ಒತ್ತಡವಾಗಲಿದೆ. ನಿಮ್ಮ ಕಾರ್ಯದಕ್ಷತೆಗೆ ಜವಾಬ್ದಾರಿಗಳು ಬದಲಾಗಲಿವೆ. ವ್ಯಾಪಾರದ ಸ್ಥಳದಲ್ಲಿ ಇಕ್ಕಟ್ಟು ಉಂಟಾಗಬಹುದು. ತಾಳ್ಮೆಯನ್ನು ಕಳೆದುಕೊಳ್ಳುವುದು ಬೇಡ. ರಾಜಕೀಯ ಏರಿಳಿತವನ್ನು ನೀವು ಊಹಿಸುವುದು ಕಷ್ಟವಾದೀತು. ಸಾಲದಿಂದ ಬಿಡುಗಡೆ ಸಿಕ್ಕ ಕಾರಣ ಕುಟುಂಬದಲ್ಲಿ ಸೌಖ್ಯವಿರುವುದು. ಎಲ್ಲ ಕೆಲಸಗಳೂ ಅಪೂರ್ಣವಾಗಿದ್ದು ನಿಮಗೆ ಅಸಮಾಧನ ಇರುವುದು. ನೂತನ ವಾಹನ ಖರೀದಿಯಿಂದ ಸಂತೋಷವಾಗಲಿದೆ.
ವೃಶ್ಚಿಕ ರಾಶಿ: ನಿಮ್ಮ ಇಂದಿನ ವಾದಕ್ಕೆ ಕೊನೆಮೊದಲಿಲ್ಲದೇ ಹೋಗಬಹುದು. ನಿಮ್ಮ ದಕ್ಷ ಕಾರ್ಯವು ಎಲ್ಲರಿಗೂ ಮಾದರಿಯಾದೀತು. ನಿಮಗೆ ಸಿಗುವ ಸಾಮಾಜಿಕವಾಗಿ ಮನ್ನಣೆಯು ಅಧಿಕ ಕಾರ್ಯವನ್ನು ಮಾಡುವಂತೆ ಮಾಡೀತು. ಸಂತಾನದ ವಿಚಾರದಲ್ಲಿ ಅಶಾಂತಿ ಮೂಡಬಹುದು. ಮೇಲಧಿಕಾರಿಗಳು ನಿಮ್ಮ ಮೇಲೆ ಒತ್ತಡ ತಂದು ಕೆಲಸವನ್ನು ಮಾಡಿಸಿಕೊಳ್ಳುವರು. ವಿರೋಧಿಗಳನ್ನು ಲೆಕ್ಕಿಸದೇ ನಿಮ್ಮಷ್ಟಕ್ಕೆ ಇರುವಿರಿ. ಅನಾರೋಗ್ಯವನ್ನೂ ನೀವು ಲೆಕ್ಕಿಸದೇ ಕಾರ್ಯದಲ್ಲಿ ಪ್ರವೃತ್ತರಾಗುವಿರಿ. ನಿಮ್ಮ ಬಯಕೆಗಳನ್ನು ಯಾರ ಬಳಿಯೂ ಪ್ರಕಟಪಡಿಸುವುದಿಲ್ಲ. ಮನಸ್ಸಿನಲ್ಲಿಯೇ ಮಂಡಿಗೆ ತಿನ್ನುವಿರಿ. ಸಣ್ಣ ವಿಚಾರಕ್ಕೆ ಯಾರನ್ನೋ ದ್ವೇಷ ಮಾಡುವುದು ಸರಿಯಲ್ಲ.
ಧನು ರಾಶಿ: ಯಾರಾದರೂ ತುರ್ತಾಗಿ ನಿಮ್ಮ ಬಳಿ ಸಾಲವನ್ನು ಕೇಳಿಬರಬಹುದು. ಅನುಕಂಪದಿಂದ ಕೊಡುವ ಯೋಚನೆಯನ್ನು ಮಾಡುವಿರಿ. ಸ್ಪರ್ಧೆಗಾಗಿ ನಡೆಸಿದ ನಿಮ್ಮ ಶ್ರಮವು ವ್ಯರ್ಥವಾದೀತು. ಆಸ್ತಿಯ ವಿಚಾರಕ್ಕೆ ನೆರಮನೆಯವರ ಜೊತೆ ಕಲಹವಾಗಲಿದೆ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿ ಇರಲಿದೆ. ಸಂಗಾತಿಯಿಂದ ನಿರೀಕ್ಷಿತ ಬೆಂಬಲವು ಸಿಗದು. ಧಾರ್ಮಿಕ ವಿಷಯದಲ್ಲಿ ನಿಮಗೆ ಆಸಕ್ತಿಯು ಕಡಿಮೆ ಆಗಲಿದೆ. ಸಕಾರಾತ್ಮಕ ಚಿಂತನೆಯನ್ನು ದೂರ ಮಾಡಿಕೊಳ್ಳುವಿರಿ. ಸದಾ ಅನುಮಾನದಿಂದಲೇ ಇರುವಿರಿ. ನಿಮ್ಮ ಗೌರವಕ್ಕೆ ತೊಂದರೆಯಾಗುವ ಕಡೆ ನೀವು ಹೋಗುವುದು ಬೇಡ.
ಮಕರ ರಾಶಿ: ನಿಮ್ಮ ಪ್ರಯತ್ನಕ್ಕೆ ಸರಿಯಾದ ಫಲವು ಸಿಗುವುದು. ಎಲ್ಲವೂ ಸರಿ ಇದ್ದರೂ ಏನೂ ಇಲ್ಲವೆಂಬ ಕೊರಗು ಮನವನ್ನು ಚುಚ್ಚುವುದು. ನಿಮ್ಮ ಬೆನ್ನನ್ನೇ ನೀವು ತಟ್ಟಿಕೊಳ್ಳುವುದು ಔಚಿತ್ಯವಿಲ್ಲ. ಆದಾಯವನ್ನು ನಿರೀಕ್ಷಿತ ಖರ್ಚಿನ ಬಗ್ಗೆ ನಿಯಂತ್ರಣ ಬೇಕು. ಅನಗತ್ಯ ಅಲೆದಾಟವನ್ನು ನಿಲ್ಲಿಸಿ ಕಾರ್ಯದಲ್ಲಿ ಮಗ್ನರಾಗಿ. ಅಲ್ಪ ಕಾರ್ಯದಿಂದ ಎಲ್ಲವೂ ಸಿದ್ಧಿಸುವುದಾದರೂ ಅಧಿಕ ಶ್ರಮವಿರುವುದು. ಕಲಾವಿದರು ಹೆಚ್ಚಿನ ಪ್ರಶಂಸೆಗೆ ಪಾತ್ರರಾಗಲಿದ್ದಾರೆ. ಯಾರೋ ಮಾಡಬೇಕಾದ ಕೆಲಸಕ್ಕೆ ನೀವು ಹೋಗಬೇಕಾದೀತು.
ಕುಂಭ ರಾಶಿ: ಪ್ರತಿಜ್ಞೆ ಭಂಗವಾದಂತೆ ನಡೆದುಕೊಳ್ಳಿ. ಪಾಲುದಾರಿಕೆಯಲ್ಲಿ ನಿಮಗೆ ಮೋಸದಂತೆ ಕಾಣುವುದು. ನಿಮ್ಮ ಭಾವನೆಗೇ ಇಂದು ನೇರವಾಗಿ ಪೆಟ್ಟುಬೀಳುವ ಸಾಧ್ಯತೆ ಇದೆ. ಅದನ್ನು ಆ ಸಮಯದಲ್ಲಿ ನಿಭಾಯಿಸುವ ಜಾಣ್ಮೆ ಇರಲಿ. ನಿಮ್ಮ ಗುರಿಯನ್ನು ಬದಲಾಯಿಸುವುದು ಬೇಡ. ಹೇಳಬೇಕಾದ ವಿಷಯದಲ್ಲಿ ಮುಚ್ಚು ಮರೆ ಇಲ್ಲದೇ ಸರಿಯಾಗಿ ಹೇಳಿ. ಬೇರೆಯವರನ್ನು ಗೊಂದಲಕ್ಕೆ ಸಿಕ್ಕಿಹಾಕಿಸುವುದು ಬೇಡ. ನಿಮ್ಮ ಕಾರ್ಯದಲ್ಲಿನ ಶಿಸ್ತು ಉಳಿದವರಿಗೆ ಕಷ್ಟವಾದೀತು. ನೀವು ಹೋದಕಡೆ ನಿಮಗೆ ಬೇಕಾದ ಹಾಗೆ ವಾತಾವರಣವನ್ನು ಸೃಷ್ಟಿಸಿಕೊಳ್ಳುವಿರಿ.
ಮೀನ ರಾಶಿ: ಇಂದು ನಿಮ್ಮ ಕಾರ್ಯದ ಒತ್ತಡದಿಂದ ಬೇರೆ ಏನನ್ನೂ ಆಲೋಚಿಸಲಾಗದು. ನೌಕರರ ಬಗ್ಗೆ ನಿಮಗೆ ಕಾಳಜಿ ಇರುವುದು. ನೀರಿನ ಸ್ಥಳದಲ್ಲಿ ಎಚ್ಚರಿಕೆಯಿಂದ ಇರಿ. ಆಪಾಯದ ಸೂಚನೆಯನ್ನು ಗಮನಿಸಿಕೊಳ್ಳಿ. ನಿಮ್ಮ ಬಗ್ಗೆ ಅತಿಯಾದ ಆತ್ಮವಿಶ್ವಾಸ ಇರಲಿದೆ. ವ್ಯಾಪಾರವನ್ನು ಅಚ್ಚುಕಟ್ಟಾಗಿ ಮುಗಿಸುವ ಕೌಶಲವು ನಿಮ್ಮಲ್ಲಿರುವುದು. ಆಮದು ವ್ಯವಹಾರವು ಸ್ವಲ್ಪ ಲಾಭವನ್ನು ಕೊಡುವುದು. ಉದ್ಯಮಿಗಳ ಭೇಟಿ ಮಾಡುವಿರಿ. ಭೂಮಿಯ ಖರೀದಿಗೆ ಸೂಕ್ತ ಸಮಯವಿದ್ದು ಇಷ್ಟಪಟ್ಟ ಭೂಮಿಯು ಸಿಗುವುದು. ಸಂಗಾತಿಯ ಮಾತಿನಿಂದ ನೀವು ನೆಮ್ಮದಿಯನ್ನು ಕಳೆದುಕೊಳ್ಳುವಿರಿ.