ಬೆಳಾಲು:(ಡಿ.24) ಬೆಳಾಲಿನ ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನ ಮತ್ತು ಅನಂತೇಶ್ವರ ಫ್ರೆಂಡ್ಸ್ ಅನಂತೋಡಿ ಇವರ ಕೊಡುಗೆಯಾಗಿ ದಿ. ದಿನೇಶ್ ಪೂಜಾರಿ ಉಪ್ಪಾರು ಇವರ ಸ್ಮರಣಾರ್ಥವಾಗಿ ನಿರ್ಮಾಣ ಮಾಡಿದ ಅನಂತೋಡಿ ವೃತ್ತವನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಉಪಾಧ್ಯಕ್ಷೆ ಮಮತಾ ದಿನೇಶ್ ಪೂಜಾರಿ ಉಪ್ಪಾರು ಉದ್ಘಾಟಿಸಿದರು.
ಇದನ್ನೂ ಓದಿ: ಬೆಳ್ತಂಗಡಿ : ಮಕ್ಕಳಿಗೆ ಮದ್ದಿನ ಸೊಪ್ಪು ತರಲು ಕಾಡಿಗೆ ಹೋದ ವ್ಯಕ್ತಿ ಕುಸಿದು ಬಿದ್ದು ಸಾವು!!!
ಈ ಸಂದರ್ಭದಲ್ಲಿ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಿಂದ ಕೊಡುಗೆಯಾಗಿ ನೀಡಿದ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿಯವರು ಉದ್ಘಾಟಿಸಿದರು.
ವೇದಿಕೆಯಲ್ಲಿ ಬೆಳ್ತಂಗಡಿ ಇಲಾಖಾ ಗುತ್ತಿಗೆ ಇಂಜಿನಿಯರ್ ಹರೀಶ್ ಕಾರಿಂಜ, ದೇವಸ್ಥಾನದ ಅಸ್ರಣ್ಣ ಗಿರೀಶ್ ಬಾರಿತ್ತಾಯ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಗೌಡ, ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್ ಕೆರ್ಮುಣ್ಣಾಯ,
ಮಹಿಳಾ ಸಮಿತಿಯ ಗೌರವಾಧ್ಯಕ್ಷೆ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ, ಮಹಿಳಾ ಸಮಿತಿಯ ಅಧ್ಯಕ್ಷೆ ಹೇಮಲತಾ ಶ್ರೀನಿವಾಸ್ ಗೌಡ, ಅನಂತೇಶ್ವರ ಫ್ರೆಂಡ್ಸ್ ಅಧ್ಯಕ್ಷ ವಿಶ್ವನಾಥ ಪೂಜಾರಿ ಬಾಯ್ತರಡ್ಡ ಉಪಸ್ಥಿತರಿದ್ದರು.
ಗಿರೀಶ್ ಎಂ. ಕಾರ್ಯಕ್ರಮ ನಿರೂಪಣೆಯೊಂದಿಗೆ ಸ್ವಾಗತಿಸಿದರು. ಸತೀಶ್ ಗೌಡ ಎಳ್ಳುಗದ್ದೆ ವಂದಿಸಿದರು.