ಬೆಳ್ತಂಗಡಿ(ಡಿ. 24): ಇಲ್ಲಿನ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಗೆ ಜಪಾನ್ ಮೂಲದ ಅಂತಾರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯ ವೇದಿಕೆ ಸಿ.ಡಬ್ಲ್ಯೂ.ಬಿ. (Community Work beyond Borders) ವತಿಯಿಂದ ಕಾಂಬೋಡಿಯಾ ಹಾಗೂ ಜಪಾನ್ ದೇಶದ ವಿದ್ಯಾರ್ಥಿಗಳನ್ನು ಒಳಗೊಂಡ ತಂಡವು ಡಿ. 24 ರಂದು ಭೇಟಿ ನೀಡಿತು.
ಇದನ್ನೂ ಓದಿ: ಬೆಳ್ತಂಗಡಿ : ಎಸ್. ಡಿ.ಎಂ ಬೆಳ್ತಂಗಡಿಯಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ
ಎಸ್ ಡಿ ಎಂ ಕಲಾ ಕೇಂದ್ರ ಹಾಗೂ ರೋಟರಿ ಕ್ಲಬ್ ಬೆಳ್ತಂಗಡಿಯ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶಾಲೆಯ ವಿವಿಧ ಚಟುವಟಿಕೆಗಳನ್ನು ತಂಡಕ್ಕೆ ಸಂಕ್ಷಿಪ್ತವಾಗಿ ಪರಿಚಯಿಸಲಾಯಿತು.
ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನಾ ನೃತ್ಯ ಪ್ರಸ್ತುತ ಪಡಿಸಿದರು. ಇದೇ ಸಂದರ್ಭದಲ್ಲಿ ಕಾಂಬೋಡಿಯಾ ಹಾಗೂ ಜಪಾನ್ ವಿದ್ಯಾರ್ಥಿಗಳೊಂದಿಗೆ ಶಾಲೆಯ ವಿದ್ಯಾರ್ಥಿಗಳು ಸಂವಾದ ನಡೆಸಿದರು.
ಇದೆ ಸಂದರ್ಭದಲ್ಲಿ ಕಾಂಬೋಡಿಯಾ ಹಾಗೂ ಜಪಾನ್ ವಿದ್ಯಾರ್ಥಿಗಳು ಕಾಂಬೋಡಿಯಾದ ಸಾಂಸ್ಕೃತಿಕ ನೃತ್ಯ ಪ್ರದರ್ಶಿಸಿದರು.
ಸಿ.ಡಬ್ಲ್ಯೂ.ಬಿ. ಇದರ ಭಾರತೀಯ ಸದಸ್ಯೆ ಮನೋರಮಾ ಅತಿಥಿಗಳನ್ನು ಪರಿಚಯಿಸಿದರು.
ಶಿಕ್ಷಕಿ ಕಸ್ತೂರಿ ಕಾರ್ಯಕ್ರಮ ನಿರ್ವಹಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಹೇಮಲತಾ ಎಂ ಆರ್ ಉಪಸ್ಥಿತರಿದ್ದರು.