ಬೆಳ್ತಂಗಡಿ :(ಡಿ.24) ಡಿ.23 ರಂದು ಮಾಲ್ಯಳ ಕಾಡಿಗೆ ಮಕ್ಕಳಿಗೆ ಮದ್ದಿನ ಸೊಪ್ಪು ತರಲು ಹೋದ ವ್ಯಕ್ತಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.
ಇದನ್ನೂ ಓದಿ: Aries to Pisces: ಸಾರ್ವಜನಿಕವಾಗಿ ಯಾರಾದರೂ ಮಿಥುನ ರಾಶಿಯವರನ್ನು ಅವಮಾನ ಮಾಡುವ ಸಾಧ್ಯತೆ ಇದೆ!!!
ಪೊದಿಂಬಿಲ ನಿವಾಸಿ ರಾಜೇಶ್ ಆಚಾರ್ಯ (36 ವ) ಮೃತ ವ್ಯಕ್ತಿ.
ಮನೆಯಿಂದ ಹೋದವರು ಮನೆಗೆ ವಾಪಸ್ಸಾಗದೆ ಇದ್ದಾಗ ಮನೆಯವರು ಮತ್ತು ಸಾರ್ವಜನಿಕರು ಹುಡುಕಾಟದಲ್ಲಿ ತೊಡಗಿದರು.
ಸ್ವಲ್ಪ ಸಮಯದ ನಂತರ ಕಲ್ಲಿನ ಸೆರೆಯಲ್ಲಿ ಸಿಲುಕಿದ ರೀತಿಯಲ್ಲಿ ಮೃತದೇಹ ಪತ್ತೆಯಾಗಿದೆ, ಮೃತರು ತಂದೆ ಆನಂದ ಆಚಾರ್ಯ ಇವರನ್ನು ಅಗಲಿದ್ದಾರೆ.
ಮೃತರು ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ಬೆಳ್ಳಿಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.
ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.