Fri. Dec 27th, 2024

Mangalore: ಜನವರಿ 11 ಮತ್ತು 12 ರಂದು ಕದ್ರಿಪಾರ್ಕಿನಲ್ಲಿ ಕಲಾ ಪರ್ಬ…!

ಮಂಗಳೂರು:(ಡಿ.24) ಜನವರಿ 11 ಮತ್ತು 12 ರಂದು ಮಂಗಳೂರಿನ ಕದ್ರಿಪಾರ್ಕ್ ನಲ್ಲಿ ‘ ಕಲಾ ಪರ್ಬ ‘ ಎಂಬ ಚಿತ್ರ, ನೃತ್ಯ, ಶಿಲ್ಪ ಮೇಳವನ್ನು ಶರಧಿ ಪ್ರತಿಷ್ಟಾನವು ‘ ಅಸ್ತ್ರ ‘ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಕರಾವಳಿ ಉತ್ಸವದ ಸಹಯೋಗದೊಂದಿಗೆ ಆಯೋಜಿಸುತ್ತಿದೆ. ಈ ಕಲಾ ಮೇಳದಲ್ಲಿ ಸುಮಾರು 150 ಕಲಾ ಮಳಿಗೆಗಳಲ್ಲಿ ಕಲಾವಿದರು ತಮ್ಮ ಕಲಾಕೃತಿಗಳ ಪ್ರದರ್ಶನವನ್ನು ಮಾಡುತ್ತಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಸುರತ್ಕಲ್: “ನಮಗೆ ಹಣ ನೀಡದಿದ್ದರೆ ಕೈ ಕಾಲು ಕಡಿಯುತ್ತೇವೆ” – ಹಫ್ತಾಕ್ಕಾಗಿ ಸಹೋದರರ ಬೆದರಿಕೆ

ಕಲಾವಿದರಿಗೆ 10ಅಡಿ ಉದ್ದಗಲದ ಮಳಿಗೆ, ಒಂದು ಟೇಬಲ್, ಕುರ್ಚಿ, ಸ್ಮರಣಿಕೆ, ಅಭಿನಂದನಾ ಪತ್ರ, 2 ದಿನಗಳು ಊಟ, ಕಾಫಿ, ತಿಂಡಿ ನೀಡಲಾಗುವುದು. ಜೊತೆಗೆ ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಮತ್ತು ಕೆನರಾ ಬ್ಯಾಂಕ್ ಪ್ರಾಯೋಜಿತ ಕಾರ್ಕಳದ ಸಿ. ಇ. ಕಾಮತ್ ಇನ್ಸಿಟ್ಯೂಟ್ ಆಫ್ ಆರ್ಟಿಸನ್ ರವರಿಂದ

ಶಿಲ್ಪ ಕಲಾ ಪ್ರಾತ್ಯಕ್ಷಿಕೆ, ನಂದಗೋಕುಲ ಕಲಾ ತಂಡ,ಭರತಾಂಜಲಿ ನೃತ್ಯ ತಂಡ, ಗಾನ ನೃತ್ಯ ಅಕಾಡೆಮಿಯವರಿಂದ ವೇದಿಕೆಯಲ್ಲಿ 2 ದಿನವೂ ನೃತ್ಯ, ಸಂಗೀತ ಕಾರ್ಯಕ್ರಮ ನಡೆಯಲಿದೆ.

ಜನವರಿ 11 ರಂದು ಮಧ್ಯಾನ್ಹ 2 ಗಂಟೆಗೆ 2 ರಿಂದ 10 ನೇ ತರಗತಿಯ ಮಕ್ಕಳಿಗೆ 3 ವಿಭಾಗಗಳಲ್ಲಿ ಚಿತ್ರ ಕಲಾ ಸ್ಪರ್ಧೆ ಜರುಗಲಿದೆ. 2ರಿಂದ 4 ನೇ ತರಗತಿಯ ಮಕ್ಕಳಿಗೆ ಸೂರ್ಯೋದಯ ಚಿತ್ರ ರಚನೆ, 5 ರಿಂದ 7 ತರಗತಿಯ ಮಕ್ಕಳಿಗೆ ನೀವು ಕಂಡ ವನ್ಯ ಜೀವಿ ಚಿತ್ರ ರಚನೆ, 8 ರಿಂದ 10 ನೇ ತರಗತಿಯ ಮಕ್ಕಳಿಗೆ ತುಳುನಾಡಿನ ಸಂಸ್ಕೃತಿ,

ಪ್ರಕೃತಿ, ಪದ್ಧತಿಯ ಬಗ್ಗೆ ಚಿತ್ರ ರಚನೆಗೆ ವಿಷಯವನ್ನು ನೀಡಲಾಗಿದೆ. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಅಭಿನಂದನಾ ಪತ್ರ, ಐಸ್ ಕ್ರೀಮ್ ಕೂಪನ್ ಗಳನ್ನು ನೀಡಲಾಗುವುದು. ಪ್ರಥಮ ಬಹುಮಾನ ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಾಗುವುದು.

ಜೊತೆಗೆ ಛಾಯಾ ಚಿತ್ರ ಪ್ರದರ್ಶನ, ಸ್ಥಳದಲ್ಲೇ ಭಾವ ಚಿತ್ರ ರಚನೆ, ವ್ಯಂಗ್ಯ ಚಿತ್ರ ರಚನೆ, ಮೇಕ್ ಅಪ್, ಮೆಹಂದಿ ಸ್ಪರ್ಧೆ, ಯೋಗ ತರಬೇತಿ, ಪ್ರತಿಷ್ಟಾಪನಾ ಕಲಾ ಪ್ರದರ್ಶನ ಇತ್ಯಾದಿ ಈ ಕಲಾ ಪರ್ಬದಲ್ಲಿ ಜರುಗಲಿವೆ. ಮನೆಗಳ ಅಂದ ಹೆಚ್ಚಿಸಲು, ಸಮಾರಂಭಗಳಿಗೆ ಕಲಾಕೃತಿಯನ್ನು ಉಡುಗೊರೆಯಾಗಿ ನೀಡಲು ಮಿತ ದರದಲ್ಲಿ ಉತ್ತಮ ಕಲಾಕೃತಿಗಳು ಈ ಮೇಳದಲ್ಲಿ ಲಭಿಸಲಿವೆ. ಚಿತ್ರ, ನೃತ್ಯ, ಶಿಲ್ಪ ಮತ್ತು ಇನ್ನಿತರ ಕಲಾ ಪ್ರಕಾರಗಳು ಕದ್ರಿ ಪಾರ್ಕ್ ನಲ್ಲಿ ಒಂದೇ ಕಡೆ ಜರುಗಲಿದ್ದು ಇದೊಂದು ಕಲಾ ಜಂಗಮ ಮತ್ತು ಕಲಾ ಸಂಭ್ರಮವಾಗಿರುತ್ತದೆ. ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *