ಮಂಗಳೂರು:(ಡಿ.24) ಸೈಬರ್ ವಂಚಕರಿಗೆ ದುಬೈನಲ್ಲಿ ಮೊಬೈಲ್ ಫೋನ್ ಸಿಮ್ ಮಾರಾಟ ಮಾಡಿದ್ದ ಆರೋಪಿಯನ್ನು ಮಂಗಳೂರು ಸೆನ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಬಂಟ್ವಾಳ: ಬಿ.ಸಿ.ರೋಡಿನ ಪರ್ಲಿಯಾ ಇತ್ತಂಡಗಳ ಗಲಾಟೆ
ಒಡಿಶಾ ರಾಜ್ಯದ ಕಣಾತಲ ವಾಸುದೇವ ರೆಡ್ಡಿ (25) ಬಂಧಿತ ಆರೋಪಿಯಾಗಿದ್ದು, ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧನ ಮಾಡಲಾಗಿದೆ.
ಷೇರು ಮಾರುಕಟ್ಟೆಯಲ್ಲಿ ಹಣ ವಿನಿಯೋಗಿಸಲು ನಕಲಿ ಲಿಂಕ್ ಕಳುಹಿಸಿ ವಂಚಿಸಿದ್ದ ಕುರಿತಂತೆ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ಸಂಬಂಧ ಈಗಾಗಲೇ ಇನ್ನೋರ್ವ ಆರೋಪಿ ನಡವೂಲು ವೀರ ವೆಂಕಟ ಸತ್ಯ ನಾರಾಯಣ ರಾಜು ಬಂಧನವಾಗಿದ್ದು, ಪೊಲೀಸರ ವಿಚಾರಣೆ ವೇಳೆ ಸಿಮ್ ಮಾರಾಟ ದಂಧೆಯ ಮಾಹಿತಿ ನೀಡಿದ್ದ ಎನ್ನಲಾಗಿದೆ.
ಹೀಗಾಗಿ ಆರೋಪಿ ವಾಸುದೇವ ರೆಡ್ಡಿ ವಿರುದ್ದ ಲುಕ್ ಔಟ್ ನೋಟೀಸ್ ಹೊರಡಿಸಲಾಗಿದ್ದ ಕಾರಣ ದುಬೈ ತೆರಳುತ್ತಿದ್ದ ವೇಳೆಯಲ್ಲಿ ಆರೋಪಿಯನ್ನು ಇಮಿಗ್ರೇಶನ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ಇಮಿಗ್ರೇಶನ್ ಅಧಿಕಾರಿಗಳಿಂದ ಆರೋಪಿ ವಾಸುದೇವ ರೆಡ್ಡಿಯನ್ನು ವಶಕ್ಕೆ ಪಡೆದ ಮಂಗಳೂರು ಪೊಲೀಸರು, ಉಳಿದ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.