Fri. Dec 27th, 2024

Master Anand‌ Divorce : ಮಾಸ್ಟರ್‌ ಆನಂದ್‌ ದಂಪತಿ ಡಿವೋರ್ಸ್?!‌ – ಪತ್ನಿ ಯಶಸ್ವಿನಿ ಹೇಳಿದ್ದೇನು?!

Master Anand Divorce :(ಡಿ.24) ಕಲಾವಿದರ ಡಿವೋರ್ಸ್‌ ವದಂತಿಗಳು ವೈರಲ್‌ ಆಗುತ್ತಿರುವುದು ಹೊಸತೇನಲ್ಲ. ಆಗಾಗ ಈ ರೀತಿಯ ಕೆಲವು ಗಾಸಿಪ್ ಗಳು ಹರಡುತ್ತಲೇ ಇರುತ್ತವೆ. ಇದೀಗ ಮಾಸ್ಟರ್‌ ಆನಂದ್ ದಂಪತಿ ಬಗ್ಗೆ ಕೆಲವು ದಿನಗಳಿಂದ ಹೊಸ ಸುದ್ದಿಯೊಂದು ವೈರಲ್‌ ಆಗ್ತಿದೆ.

ಇದನ್ನೂ ಓದಿ: ಬೆಳ್ತಂಗಡಿ : ಮಕ್ಕಳಿಗೆ ಮದ್ದಿನ ಸೊಪ್ಪು ತರಲು ಕಾಡಿಗೆ ಹೋದ ವ್ಯಕ್ತಿ ಕುಸಿದು ಬಿದ್ದು ಸಾವು!!!

ಮಾಸ್ಟರ್‌ ಆನಂದ್‌ ದಂಪತಿಗಳು ಡಿವೋರ್ಸ್ ಪಡೆಯುವ ವಿಚಾರಕ್ಕೆ ಇದೀಗ ಕನ್ನಡ ಚಿತ್ರರಂಗದ ಖ್ಯಾತ ನಟ, ಕಿರುತೆರೆಯ ಜನಪ್ರಿಯ ನಿರೂಪಕ ಮಾಸ್ಟರ್‌ ಆನಂದ್ ಹಾಗೂ ಅವರ ಪತ್ನಿ ಯಶಸ್ವಿನಿ ಹೆಸರು ತುಳುಕು ಹಾಕಿಕೊಂಡಿದೆ. ಮಹಿಳೆಯೊಬ್ಬರು ಮಾಡಿದ ಒಂದೇ ಒಂದು ಕಮೆಂಟ್‌ನಿಂದ ಈ ಸುದ್ದಿ ಮುನ್ನೆಲೆ ಬಂದಿದ್ದು, ಈಗಾಗಲೇ ಯಶಸ್ವಿನಿ ಮಾಸ್ಟರ್‌ ಆನಂದ್ ಈ ಗಾಳಿ ಸುದ್ದಿಗೆ ಬ್ರೇಕ್‌ ಹಾಕಿದ್ದು, ಮನಸೋ ಇಚ್ಛೆ ಕಮೆಂಟ್‌ ಹಾಕುವವರ ಚಳಿ ಬಿಡಿಸಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

ನಟ ಮಾಸ್ಟರ್‌ ಆನಂದ್‌ ಪತ್ನಿ ಯಶಸ್ವಿನಿ ಅವರು ಇದೀಗ ಒಂದು ಕಮೆಂಟ್‌ ರಿಪ್ಲೈ ಮಾಡಿದ್ದು ಗಮನ ಸೆಳೆದಿದೆ. ತುಂಬ ವಿನಯವಾಗಿಯೇ, ತಾವು ಏನು ಹೇಳಬೇಕೋ ಅದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಇತ್ತೀಚೆಗೆ ಯಶಸ್ವಿನಿ ಆನಂದ್‌ ಅವರು ಒಂದು ರೀಲ್ಸ್‌ ಪೋಸ್ಟ್‌ ಮಾಡಿದ್ದರು. ತೀರ ಚಿಕ್ಕದಾದ ಸ್ಕರ್ಟ್‌ ಹಾಕಿಕೊಂಡು, ʼಈ ಹಾರ್ಟಿಗೆ..ಏನಾಗಿದೆʼ ಎಂಬ ಹಾಡಿಗೆ ಡ್ಯಾನ್ಸ್‌ ಮಾಡಿದ್ದರು. ಯಶಸ್ವಿನಿ ಅವರ ಈ ರೀಲ್ಸ್‌ಗೆ ಅನೇಕರು ಒಳ್ಳೆಯ ಕಮೆಂಟ್‌ ಹಾಕಿದ್ದಾರೆ. ಅವರನ್ನು ಹೊಗಳಿದ್ದಾರೆ. ಆದರೂ ಒಬ್ಬಳು ಯುವತಿ ಸ್ವಲ್ಪ ಅಧಿಕಪ್ರಸಂಗತನದ ಕಮೆಂಟ್‌ ಮಾಡಿದ್ದಳು..ʼಶೀಘ್ರದಲ್ಲಿಯೇ ಇನ್ನೊಂದು ಡಿವೋರ್ಸ್‌ ಆಗಲಿದೆʼ ಎಂದು ಹೇಳಿದ್ದಳು.

ಯುವತಿಯ ಈ ಕಮೆಂಟ್‌ಗೆ ಯಶಸ್ವಿನಿ ಆನಂದ್‌ ಉತ್ತರಿಸಿದ್ದಾರೆ. “ಮೇಡಂ..ಅದು ಎಂದಿಗೂ ಸಾಧ್ಯವಿಲ್ಲ. ನಾನು ನನ್ನ ಮಕ್ಕಳಿಗಿಂತಲೂ ಜಾಸ್ತಿ ನನ್ನ ಗಂಡನನ್ನೇ ಪ್ರೀತಿಸುತ್ತೇನೆ. ಇಂಥದ್ದನ್ನು ದಯವಿಟ್ಟು ಹೇಳಬೇಡಿ ಮತ್ತು ಇಲ್ಲಸಲ್ಲದ್ದನ್ನು ರೂಮರ್‌ ಮಾಡಬೇಡಿ” ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಅವರು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ , “ತಾವು ಪತಿ ಆನಂದ್‌ ಅವರೊಂದಿಗೆ ಇರುವ ಹಳೇ ಫೋಟೋವನ್ನು ಹಂಚಿಕೊಂಡಿದ್ದಾರೆ” ಈ ಫೋಟೋ ನೋಡಿ ಕಣ್ಣೀರು ಬಂತು ಎಂದು ಕ್ಯಾಪ್ಷನ್‌ ಕೂಡ ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *