ಸುರತ್ಕಲ್:(ಡಿ.24) ಟ್ರಾನ್ಸ್ಪೋರ್ಟ್ ಮಾಲೀಕರಿಗೆ ಹಣದ ಬೇಡಿಕೆಯಿಟ್ಟು ಬೆದರಿಕೆ ಹಾಕಿದ ಇಬ್ಬರನ್ನು ಸುರತ್ಕಲ್ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಇದನ್ನೂ ಓದಿ: Love Jihad: ಲವ್ ಜಿಹಾದ್ ಗೆ ಬೇಸತ್ತು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಹಿಂದು ಯುವತಿ!!!!
ಆರೋಪಿಗಳನ್ನು ಇಡ್ಯಾ ನಿವಾಸಿ ಅನಿಶ್ ಎಚ್.ಕರ್ಕೇರ(29) ಹಾಗೂ ಅವನ ಸಹೋದರ ಆಕಾಶ್ ಎಚ್. ಕರ್ಕೇರ (27) ಎಂದು ಗುರುತಿಸಲಾಗಿದೆ.
ಸುರತ್ಕಲ್ ಬಳಿಯ ಕಾನ ಜಂಕ್ಷನ್‌ನ ಟ್ರಾನ್ಸ್ಪೋರ್ಟ್ ಮಾಲೀಕರಿಗೆ ಹಣದ ಬೇಡಿಕೆ ಇರಿಸಿ ಕೈಕಾಲು ಕಡಿಯುವುದಾಗಿ ಬೆದರಿಕೆ ಹಾಕಿದ ಬಗ್ಗೆ ಪ್ರಕರಣ ದಾಖಲಾಗಿತ್ತು. ಡಿ. 16ರಂದು ಇನೋವಾ ಕಾರಿನಲ್ಲಿ ಮಾಲೀಕರನ್ನು ಕುಳ್ಳಿರಿಸಿ.
“ನೀನು ಡಾಂಬರ್ ಹಾಗೂ ನೀರು ಸಾಗಾಟದಲ್ಲಿ ಭಾರೀ ಹಣ ಮಾಡಿದ್ದಿ” ಎಂದು ಕಾರಿನಲ್ಲಿ ಬಂದಿದ್ದ ಐವರ ಪೈಕಿ ಅನಿಶ್ ಹಾಗೂ ಆಕಾಶ್ ಬೈದಿದ್ದು ಅದೇ ದಿನ ರಾತ್ರಿ ಕರೆ ಮಾಡಿ ನೀನು “ನಮಗೆ ಹಫ್ತಾ ನೀಡದಿದ್ದರೆ ಕೈಕಾಲು ಕಡಿಯುವುದಾಗಿ” ಬೆದರಿಕೆ ಹಾಕಿದ್ದಾರೆ.
ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸುರತ್ಕಲ್ ಪಿಐ ಮಹೇಶ್ ಪ್ರಸಾದ್, ಸಿಬ್ಬಂದಿಗಳು ತನಿಖೆ ಆರಂಭಿಸಿ ಅರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಜಾಮೀನು ನೀಡಿ ಬಿಡುಗಡೆ ಮಾಡಿದೆ.