ಪೆರಾಲ್ದರ ಕಟ್ಟೆ (ಡಿ.25) : ಬದ್ರಿಯಾ ಜುಮಾ ಮಸ್ಜಿದ್ ಪೆರಾಲ್ದರ ಕಟ್ಟೆ, SKSSF ಪೆರಾಲ್ದರ ಕಟ್ಟೆ ಶಾಖೆ ಹಾಗೂ ಬದ್ರಿಯಾ ಯಂಗ್‌ಮೆನ್ಸ್ ಪೆರಾಲ್ದರ ಕಟ್ಟೆ ಇದರ ಜಂಟಿ ಆಶ್ರಯದಲ್ಲಿ ಪ್ರಸ್ತುತ ಮುಸ್ಲಿಮ್ ಸಮಾಜದಲ್ಲಿ ಸಾಮಾಜಿಕ ಪಿಡುಗಾಗಿ ನೆಲೆ ನಿಂತಿರುವ ಮಾದಕ ವ್ಯಸನ ಮತ್ತು ಮದುವೆ ಅನಾಚಾರದ ವಿರುದ್ದ ಜಾಗೃತಿ ಸಭೆ ಡಿ. 27 ರಂದು ಬದ್ರಿಯಾ ಜುಮಾ ಮಸ್ಜಿದ್ ಪೆರಾಲ್ದರ ಕಟ್ಟೆ ವಠಾರದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಶಂಶುದ್ದೀನ್ ದಾರಿಮಿ ಪೆರಾಲ್ದರಕಟ್ಟೆ ರವರು ನೆರವೇರಿಸಲಿದ್ದು ಅಬೂಬಕ್ಕರ್ ಸಿದ್ದೀಕ್ ಜಲಾಲಿ, ಖತೀಬರು ಕೇಂದ್ರ ಜುಮಾ ಮಸ್ಜಿದ್ ಕಕ್ಕಿಂಜೆ ರವರು ಮದುವೆ ಅನಾಚಾರ ಪಿಡುಗಿನ ವಿರುದ್ದ ವಿಷಯ ಮಂಡನೆ ಮಾಡಲಿದ್ದಾರೆ ಹಾಗೂ ಡಾ ರಫೀಕ್ ಮಾಸ್ಟರ್’ರವರು ಮಾದಕ ವ್ಯಸನ ವಿಷಯದಲ್ಲಿ ಜಾಗೃತಿ ಭಾಷಣ ಮಾಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪೆರಾಲ್ದರ ಕಟ್ಟೆ ಜಮಾತ್ ಭಾಂದವರು ಮತ್ತು ಸ್ಥಳೀಯ ಜಮಾತ್’ಗಳ ಗಣ್ಯರು ಭಾಗವಹಿಸಲಿದ್ದು, ವೇಣೂರು ಠಾಣಾ ಸಬ್ ಇನ್ಸ್’ಪೆಕ್ಟರ್ ಶೈಲಾ ಮುರಗೋಡು, ಬದ್ರಿಯಾ ಜುಮಾ ಮಸ್ಜಿದ್ ಪೆರಾಲ್ದರ ಕಟ್ಟೆ, ಇದರ ಅಧ್ಯಕ್ಷ ನವಾಝ್ ಶರೀಫ್ ಕಟ್ಟೆ ಮತ್ತು ಸ್ಯಳೀಯ ಜಮಾಅತ್ ಪ್ರತಿನಿಧಿಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.