ಬೆಳ್ತಂಗಡಿ (ಡಿ : 25) : ಬೆಳ್ತಂಗಡಿ ವಕೀಲರ ಸಂಘ ಮತ್ತು ಕ್ಲೂ ಫೋರ್ ಎವಿಡೆನ್ಸ್ ಫಾರೆನ್ಸಿಕ್ ಲ್ಯಾಬ್ ಬೆಂಗಳೂರು ಇದರ ಸಹಯೋಗದಲ್ಲಿ ಇಂಪಾರ್ಟೆನ್ಸ್ ಆಫ್ ಫಾರೆನ್ಸಿಕ್ಸ್ ಇನ್ ಲಿಟಿಗೇಷನ್ ಎಂಬ ವಿಷಯದ ಬಗ್ಗೆ ವಕೀಲರಿಗೆ ಕಾನೂನು ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕ್ಲೂ ಫೋರ್ ಎವಿಡೆನ್ಸ್ ಫಾರೆನ್ಸಿಕ್ ಲ್ಯಾಬ್ ಬೆಂಗಳೂರು ಇದರ ನಿರ್ದೇಶಕರಾದ ಶ್ರೀ ಫನೀ0ದರ್ ಬಿ ಎನ್ ಇವರು ಈ ಕಾನೂನಿನ ಬಗ್ಗೆ ಅರ್ಥವತ್ತಾಗಿ ಬಹಳ ಉಪಯುಕ್ತ ಮಾಹಿತಿಯನ್ನು ನೀಡಿದರು.
ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ವಸಂತ ಮರಕಡ ಇವರು ಈ ಕಾರ್ಯಾಗಾರ ದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಬೆಳ್ತಂಗಡಿ ಹಿರಿಯ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಮನು ಬಿ ಕೆ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಂದೇಶ್ ಕೆ ಮತ್ತು ಹೆಚ್ಚುವರಿ ನ್ಯಾಯಾಧೀಶರಾದ ಶ್ರೀ ವಿಜಯೇಂದ್ರ ಟಿ ಹೆಚ್ ಉಪಸ್ಥಿತರಿದ್ದರು.
ಈ ಕಾರ್ಯಾಗಾರದಲ್ಲಿ ಬೆಳ್ತಂಗಡಿಯ ವಕೀಲರ ಸಂಘದ ಪದಾಧಿಕಾರಿಗಳು, ನ್ಯಾಯವಾದಿಗಳು, ಅಪರ ಸರ್ಕಾರಿ ವಕೀಲರಾದ ಶ್ರೀ ಮನೋಹರ್ ಕುಮಾರ್ ಎ , ಸರಕಾರಿ ವಕೀಲರು, ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು. ಕಾರ್ಯಾಗಾರದ ನಿರೂಪಣೆಯನ್ನು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ನವೀನ್ ಬಿ.ಕೆ ಇವರು ನಿರ್ವಹಿಸಿದರು.