ಕಡಬ:(ಡಿ.26) ತೋಟಕ್ಕೆ ನುಗ್ಗಿದ ಹಸುವಿನ ಕಾಲನ್ನು ಅನ್ಯಕೋಮಿನ ವ್ಯಕ್ತಿಯೊಬ್ಬರು ಕಡಿದ ಘಟನೆ ಕಡಬ ಠಾಣಾ ವ್ಯಾಪ್ತಿಯ ರಾಮಕುಂಜ ಕೊಂಡ್ಯಾಡಿ ಎಂಬಲ್ಲಿ ಡಿ.22ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಕುಂದಾಪುರ: ಸ್ಕಿಡ್ ಆಗಿ ಕಂದಕಕ್ಕೆ ಬಿದ್ದ ಸೇನಾ ಟ್ರಕ್
ಇಲ್ಲಿನ ಮಹಿಳೆಯೊಬ್ಬರು ತನ್ನ ತೋಟದಲ್ಲಿ ದನ ಮೇಯಲು ಬಿಟ್ಟಿದ್ದರು. ಸಂಜೆಯಾದರೂ ಮರಳಿ ಬಾರದೆ ಇರುವುದನ್ನು ಗಮನಿಸಿ ಹುಡುಕಾಡಿದ್ದರು.
ಈ ವೇಳೆ ಪಕ್ಕದ ಮನೆಯ ವ್ಯಕ್ತಿಯೊಬ್ಬರ ತೋಟದಲ್ಲಿ ಹಸು ಗಂಭೀರವಾಗಿ ಗಾಯಗೊಂಡು ಬಿದ್ದಿರೋದು ಕಂಡಿದೆ.
ಈ ಬಗ್ಗೆ ಪಕ್ಕದ ಮನೆಯ ವ್ಯಕ್ತಿಯಲ್ಲಿ ವಿಚಾರಿಸಿದಾಗ ನಾನೇ ಕತ್ತಿಯಲ್ಲಿ ಕಡಿದದ್ದು ಏನೀವಾಗ? ನನ್ನನ್ನು ಏನು ಮಾಡಲು ಆಗುತ್ತದೆ? ನೀನು ಬಂದದ್ದು ಸ್ವಲ್ಪ ಬೇಗ ಆಯ್ತು, ಇಲ್ಲದಿದ್ದರೆ ಮಾಂಸ ಮಾಡಿ ಆಗುತ್ತಿತ್ತು ಎಂದು ನನಗೆ ಬೈದಿರುವುದಾಗಿ ಮಹಿಳೆ ದೂರಿನಲ್ಲೂ ಉಲ್ಲೇಖಿಸಿದ್ದಾರೆ.
ಅಷ್ಟೇ ಅಲ್ಲದೇ ಮರುದಿನ ಬೆಳಗ್ಗೆ ಆತ ನನ್ನಲ್ಲಿ ದನ ಸತ್ತಿತಾ, ಸಾಯುವ ಮುನ್ನ ನಾನು ಕೊಂಡು ಹೋದ್ರೆ, ಪದಾರ್ಥಕ್ಕೆ ಆದ್ರೂ ಆದೀತು ಎಂದು ಹೇಳಿದ್ದು ಇದರಿಂದ ನನಗೆ ಮಾನಸಿಕ ಆಘಾತವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.