ಮಂಗಳೂರು:(ಡಿ.26) ಮಂಗಳೂರಿನ ಸಮಾಜ ಸೇವಾ ಸಹಕಾರಿ ಸಂಘದಲ್ಲಿ ನಕಲಿ ಚಿನ್ನವಿಟ್ಟು ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ: Kasaragodu : ಸೂಪರ್ ಮಾರ್ಕೆಟ್ ಒಳಗೆ ನುಗ್ಗಿದ ಕಾಡು ಹಂದಿ!!
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಸಂಘದ ಆಡಳಿತ ಮಂಡಳಿ ನಮ್ಮ ಸಂಘದಲ್ಲಿ ಇಂತಹ ಒಂದು ಘಟನೆ ಆಗಿದೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಘಟನೆ ಬಗ್ಗೆ ನಾವು ಕಾನೂನು ರೀತಿಯಲ್ಲಿ ಎಲ್ಲಾ ಕ್ರಮ ಕೈಗೊಂಡಿದ್ದೇವೆ. ಯಾರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಅದನ್ನು ಕೂಡ ನಮ್ಮ ಸಂಘದ ಆಡಳಿತ ಮಂಡಳಿಯ ಸಭೆ ಕರೆದು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಮುಂದೆ ನಡೆಯುವ ಚುನಾವಣೆಯ ದೃಷ್ಟಿಯಿಂದ ಇಂತಹ ಕೃತ್ಯಗಳನ್ನು ಮಾಡಲಾಗುತ್ತಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನಮಗೆ ಪೊಲೀಸರ ಮೇಲೆ ಮತ್ತು ನ್ಯಾಯಾಲಯದ ಮೇಲೆ ಗೌರವ, ನಂಬಿಕೆ ಇದೆ ಎಂದಿದ್ದಾರೆ.
ಏನಿದು ಘಟನೆ?
ಬಂಟ್ವಾಳದ ಸಮಾಜ ಸೇವಾ ಸಹಕಾರಿ ಸಂಘದ ಮಂಗಳೂರಿನ ಪಡೀಲ್ ಶಾಖೆಯಲ್ಲಿ ವ್ಯಕ್ತಿಯೊಬ್ಬರಿಗೆ ನಕಲಿ ಆಭರಣಕ್ಕೆ ಈಡಿನ ಆಧಾರದಲ್ಲಿ 2,11,89,800 ರೂ. ಸಾಲ ನೀಡಿರುವ ಪ್ರಕರಣಕ್ಕೆ ಸಂಬoಧಿಸಿ ಈ ಸಹಕಾರಿ ಸಂಘದ ಅಧ್ಯಕ್ಷ, ನಿರ್ದೇಶಕ, ಶಾಖೆಯ ಪ್ರಭಾರ ವ್ಯವಸ್ಥಾಪಕ ಸಹಿತ 28 ಮಂದಿಯ ವಿರುದ್ಧ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬoಧಿಸಿ ಎರಡನೇ ಆರೋಪಿ, ಸಹಕಾರಿ ಸಂಘದ ಸರಪ್ (ಚಿನ್ನ ಪರೀಕ್ಷಕ) ವಿವೇಕ್ ಆಚಾರ್ಯರನ್ನು ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ಈಶ್ವರಮಂಗಳ ನಿವಾಸಿ, ಪ್ರಕರಣದ ಪ್ರಮುಖ ಆರೋಪಿ ಅಬೂಬಕರ್ ಸಿದ್ದೀಕ್ ಎಂಬಾತ ನಕಲಿ ಚಿನ್ನದ ಬಳೆಗಳನ್ನು ಅಡವಿಟ್ಟು 2,22,89,800 ರೂ. ಸಾಲ ಪಡೆದಿದ್ದಾನೆ. ಈ ಚಿನ್ನಾಭರಣವನ್ನು ಪರಿಶೀಲಿಸಿದ ಸಂಘದ ಸರಪ್ ವಿವೇಕ್ ಆಚಾರ್ಯ ಅದು ನೈಜ ಚಿನ್ನವೆಂದು ದೃಢೀಕರಿಸಿದ್ದಾರೆ. ಸಂಘದ ಆಡಳಿತ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರು, ನಿರ್ದೇಶಕರು ಮತ್ತು ಪ್ರಧಾನ ವ್ಯವಸ್ಥಾಪಕರ ನಿರ್ದೇಶನದಂತೆ ಶಾಖೆಯ ಪ್ರಭಾರ ವ್ಯವಸ್ಥಾಪಕ ಪ್ರಶಾಂತ್ ಈ ಭಾರೀ ಮೊತ್ತದ ಸಾಲವನ್ನು 2023ರ ನವೆಂಬರ್ 13ರಿಂದ 2024ರ ಫೆಬ್ರವರಿ 3ರ ಅವಧಿಯಲ್ಲಿ ನೀಡಲಾಗಿತ್ತು.
ಈ ವರ್ಷದ ಫೆಬ್ರವರಿ ಮೊದಲ ವಾರದಲ್ಲಿ ಈ ವಿಚಾರ ಬೆಳಕಿಗೆ ಬಂದಿದ್ದು, ಸಂಘದ ಹಿರಿಯ ಸದಸ್ಯರು ಮೈಸೂರಿನ ನಿಬಂಧಕರಿಗೆ ಎಪ್ರಿಲ್ 10ರಂದು ದೂರು ಅರ್ಜಿಯನ್ನು ಸಲ್ಲಿಸಿದ್ದರು. ಬಳಿಕ ಜುಲೈ 1ರಂದು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗೂ ದೂರು ಸಲ್ಲಿಸಲಾಗಿತ್ತು. ಮೈಸೂರು ನಿಬಂಧಕರು, ದ.ಕ. ಉಸ್ತುವಾರಿ ಸಚಿವರು ಹಾಗೂ ದ.ಕ.ಜಿಲ್ಲಾಧಿಕಾರಿಯವರು ಮಂಗಳೂರು ಉಪ ನಿಬಂಧಕರಿಗೆ ನೋಟಿಸ್ ಜಾರಿ ಮಾಡಿ ತನಿಖೆಗೆ ಆದೇಶಿಸಿದ್ದರು. ಆದರೆ ಮಂಗಳೂರು ಉಪ ನಿಬಂಧಕರು ನಮಗೆ ಹೇಳಿಕೆ ದಾಖಲಿಸಲು ಅವಕಾಶ ನೀಡದೆ ಶಾಸನಬದ್ಧ ತನಿಖೆಗೆ ಶಿಫಾರಸು ಮಾಡಿ ತನಿಖೆ ಮುಕ್ತಾಯಗೊಳಿಸಿ ಹಿಂಬರಹ ನೀಡಿದ್ದರು. ಪೊಲೀಸ್ ವರಿಷ್ಠಾಧಿಕಾರಿಯವರು ಆರೋಪಿಗಳ ವಿಚಾರಣೆ ನಡೆಸಿದ ವೇಳೆ ಆರೋಪಿಗಳು ಆರೋಪ ನಿರಾಕರಿಸಿ ಸುಳ್ಳು ಹೇಳಿಕೆ ನೀಡಿದ್ದರು. ಬಳಿಕ ಪ್ರಕರಣ ಕಮಿಷನರೇಟ್ ವ್ಯಾಪ್ತಿಗೆ ಬರುವುದಾಗಿ ಹೇಳಿ ನ್ಯಾಯಾಲಯದಲ್ಲಿ ಸಮಸ್ಯೆ ಬಗೆಹರಿಸುವಂತೆ ತಿಳಿಸಲಾಗಿತ್ತು.
ಈ ನಡುವೆ ನಕಲಿ ಚಿನ್ನಾಭರಣದ ಹರಾಜು ಪ್ರಕ್ರಿಯೆ ಗುಪ್ತ ಸ್ಥಳದಲ್ಲಿ ನಡೆಸಲಾಗಿತ್ತು. ಒಟ್ಟು ಸಾಲದಲ್ಲಿ 1.31 ಕೋಟಿ ರೂ. ಬಾಕಿ ಇದ್ದು, ಸಂಘದ ನಿಯಮದ ಪ್ರಕಾರ ಸಾಲಗಾರರೊಬ್ಬರಿಗೆ ಒಂದು ದಿನದಲ್ಲಿ 20 ಲಕ ರೂ. ಮಾತ್ರ ಚಿನ್ನಾಭರಣ ಸಾಲ ನೀಡಬಹುದಾಗಿದ್ದರೂ ನಿಯಮ ಉಲ್ಲಂಘಿಸಲಾಗಿದೆ. ಪ್ರಕರಣದ ಬಗ್ಗೆ ಕಮಿಷನರ್ ರನ್ನು ಭೇಟಿಯಾಗಿ ವಿವರಿಸಿದ ಬಳಿಕ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಪ್ರಕರಣಕ್ಕೆ ಸಂಬಂಧಿಸಿ 2ನೇ ಆರೋಪಿ ವಿವೇಕ್ ಆಚಾರ್ಯರ ಬಂಧನವಾಗಿದೆ.