Fri. Apr 11th, 2025

Padmunja: ಪದ್ಮುಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ (ನಿ.) ದ ಚುನಾವಣೆ – ಸಹಕಾರ ಭಾರತಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಪದ್ಮುಂಜ :(ಡಿ.26) ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಪದ್ಮುಂಜ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ಅಭ್ಯರ್ಥಿಗಳಾಗಿ ಸಾಮಾನ್ಯ ಕ್ಷೇತ್ರದಿಂದ ರಕ್ಷಿತ್ ಪಿ.ಪಣೆಕ್ಕರ, ನಾರಾಯಣ ಗೌಡ,

ಇದನ್ನೂ ಓದಿ: ಮಂಗಳೂರು: ಗೋಮಾಂಸ ಸಾಗಾಟವನ್ನು ತಡೆದ ಬಜರಂಗದಳ.!!

ಉದಯ ಭಟ್.ಕೆ, ಡೀಕಯ್ಯ ಗೌಡ, ರುಕ್ಮಯ್ಯ ಗೌಡ ಯಾನೆ ಪ್ರಭಾಕರ, ಪ್ರಸಾದ್.ಎ, ಹಿಂದುಳಿದ ವರ್ಗ ಎ ಕ್ಷೇತ್ರ ದಿಂದ ಉದಯ ಬಿ.ಕೆ, ಹಿಂದುಳಿದ ಬಿ ಕ್ಷೇತ್ರ ದಿಂದ ಅಶೋಕ.ಪಿ, ಮಹಿಳಾ ಕ್ಷೇತ್ರದಿಂದ ಶೀಲಾವತಿ, ಶಾರದಾ.ಆರ್. ರೈ, ಪರಿಶಿಷ್ಟ ಜಾತಿ ಕ್ಷೇತ್ರ ದಿಂದ ಚಂದನ್ ಕುಮಾರ್.ಎ ಪರಿಶಿಷ್ಟ ಪಂಗಡದಿಂದ ದಿನೇಶ್ ನಾಯ್ಕ ಇವರುಗಳು


ಬಿ.ವಿ. ಪ್ರತಿಮಾ ರಿಟರ್ನಿಂಗ್ ಅಧಿಕಾರಿಯವರಿಗೆ ಡಿಸೆಂಬರ್ 25 ರಂದು ಸಂಘದ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಣಿಯೂರು ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಬಾಲಕೃಷ್ಣ ಗೌಡ, ಕಣಿಯೂರು ಶಕ್ತಿ ಕೇಂದ್ರ ಪ್ರಮುಖ್ ಯತೀಶ್ ಶೆಟ್ಟಿ ಪಣೆಕ್ಕರ, ಕಣಿಯೂರು ಪಂಚಾಯತ್ ಅಧ್ಯಕ್ಷರಾದ ಸೀತಾರಾಮ ಮಡಿವಾಳ, ಬಂದಾರು ಶಕ್ತಿ ಕೇಂದ್ರ ಪ್ರಮುಖ್ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ,


ಮೊಗ್ರು ಶಕ್ತಿ ಕೇಂದ್ರ ಪ್ರಮುಖರಾದ ಗಂಗಾಧರ್ ಪೂಜಾರಿ ಹಾಗೂ ಜಿಲ್ಲೆ, ಮಂಡಲ, ಮಹಾಶಕ್ತಿ ಕೇಂದ್ರ, ಬಂದಾರು, ಮೊಗ್ರು, ಕಣಿಯೂರು ಬೂತ್ ಸಮಿತಿ ಪದಾಧಿಕಾರಿಗಳು, ಜನಪ್ರತಿನಿಧಿನಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು