ಉತ್ತರಪ್ರದೇಶ:(ಡಿ.26) ಮೋಸ ಹೋಗುವವರು ಇದ್ದರೆ ನೂರಾರು ರೀತಿಯಲ್ಲಿ ಮೋಸ ಮಾಡುವವರು ಹುಟ್ಟಿಕೊಳ್ಳುತ್ತಾರೆ ಅನ್ನೋದಕ್ಕೆ ಇದೊಂದು ಸಾಕ್ಷಿ. ಇಲ್ಲೊಂದು ಟೀಮ್ ಒಂಟಿಯಾಗಿರುವ ಯುವಕರನ್ನು ಮದುವೆ ಆಗುವ ನೆಪದಲ್ಲಿ ಚಿನ್ನ, ಹಣ ದೋಚಿ ಪರಾರಿಯಾಗುವ ಪ್ಲಾನ್ ನಲ್ಲಿ ಎಕ್ಸ್ಪರ್ಟ್ ಆಗಿದೆ. ಆದ್ರೆ ಇದೀಗ 6 ಮದುವೆ ಆಗಿ ವಂಚಿಸಿದ್ದ ಮಹಿಳೆಯರ ಗ್ಯಾಂಗ್ 7ನೇ ಮದುವೆ ಪ್ರಯತ್ನದಲ್ಲಿ ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ: ಉಡುಪಿ: ಪಿಕಪ್-ಕಾರಿನ ನಡುವೆ ಅಪಘಾತ
ಈ ಘಟನೆ ಉತ್ತರ ಪ್ರದೇಶದ ಬಂದಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರನ್ನು ಬಂಧಿಸಲಾಗಿದೆ. ವಧು ಎಂದು ಹೇಳಿಕೊಳ್ಳುತ್ತಿದ್ದ ಬಿಂದು ಹಾಗೂ ಆಕೆಯ ತಾಯಿಯಂತೆ ತೋರಿಸಿಕೊಳ್ಳುತ್ತಿದ್ದ ಮತ್ತೊಬ್ಬ ಮಹಿಳೆ ಸಂಜನಾ ಗುಪ್ತ ಅಲ್ಲದೇ ವಿಮಲೇಶ್ ವರ್ಮಾ ಮತ್ತು ಧರ್ಮೇಂದ್ರ ಪ್ರಜಾಪತಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಸರಳವಾಗಿ ಕೋರ್ಟ್ ನಲ್ಲಿ ಮದುವೆ ಆಗುವಂತೆ ಒತ್ತಾಯಿಸಿ ಕಾನೂನು ಬಲ ಪಡೆಯುವ ಈ ಗ್ಯಾಂಗ್ ನಂತರ ಗಂಡನ ಮನೆಯೊಳಗೆ ಪ್ರವೇಶ ಗಿಟ್ಟಿಸಿ, ಸಮಯ ನೋಡಿ ಮದುವೆ ಆದ ಯುವತಿ, ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಓಡಿ ಬರುತ್ತಿದ್ದಳು. ಈ ರೀತಿ ನಾಲ್ವರು ಸೇರಿ 6 ಮಂದಿಯ ಜೊತೆಗೆ ಮದುವೆ ನಾಟಕವಾಡಿ ಲಕ್ಷಾಂತರ ರೂಪಾಯಿ ದೋಚಿದ್ದರು. ಆದರೆ 7ನೇ ಮದುವೆ ಪ್ರಯತ್ನದಲ್ಲಿದ್ದಾಗ ಗಾಳ ಹಾಕಿದ್ದ ವರನ ಮೂಲಕ ಸಿಕ್ಕಿಬಿದ್ದಿದ್ದಾರೆ.
ಮಾಹಿತಿ ಪ್ರಕಾರ, ಉಪಾಧ್ಯಾಯ ಎಂಬುವವರನ್ನು ಪರಿಚಯ ಮಾಡಿಕೊಂಡ ವಿಮಲೇಶ್ 1.5 ಲಕ್ಷ ರೂ. ನೀಡಿದರೆ ಮದುವೆಗೆ ಹುಡುಗಿ ತೋರಿಸಿ ಒಪ್ಪಿಸುವುದಾಗಿ ಹೇಳಿದ. ನಂತರ ಬಿಂದು ಎಂಬಾಕೆಯನ್ನು ಪರಿಚಯಿಸಿ ಸರಳ ಮದುವೆಗೆ ಪ್ರಚೋದಿಸಿದ. ಆದರೆ ಇವರ ವರ್ತನೆ ಹಾಗೂ ಹಣದ ಬೇಡಿಕೆಯಿಂದ ಅನುಮಾನಗೊಂಡ ಉಪಾಧ್ಯಾಯ, ಯುವತಿ ಹಾಗೂ ಯುವತಿಯ ತಾಯಿಯ ಆಧಾರ್ ಕಾರ್ಡ್ ತೋರಿಸುವಂತೆ ಕೇಳಿದ್ದಾನೆ. ಆಗ ಅವರು ಆಧಾರ್ ತೋರಿಸಲು ಹಿಂಜರಿದಾಗ ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.