Air strip:(ಡಿ.27) ಸರ್ಕಾರವು ಧರ್ಮಸ್ಥಳ, ಕೊಡಗು, ಚಿಕ್ಕಮಗಳೂರಿನಲ್ಲಿ ಮಿನಿ ವಿಮಾನ ನಿಲ್ದಾಣಕ್ಕೆ ಮಹತ್ವದ ಯೋಜನೆ ರೂಪಿಸಿದೆ. ಈ ಮೂಲಕ ಜನರಿಗೆ ಸಿಹಿ ಸುದ್ದಿ ನೀಡಿದೆ.
ಇದನ್ನೂ ಓದಿ: ಬೆಳ್ತಂಗಡಿ: ಭುಜಬಲಿ ಧರ್ಮಸ್ಥಳ ರವರಿಗೆ “ಶ್ರೀ ಯಕ್ಷಾಂಜನೇಯ” ಪ್ರಶಸ್ತಿ ಪ್ರದಾನ
ಈಗಾಗಲೇ ಸರ್ಕಾರವು ಪ್ರವಾಸೋದ್ಯಮ, ಕೈಗಾರಿಕೆ ಅಭಿವೃದ್ಧಿ, ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ತುರ್ತು ಸ್ಪಂದನೆ ಉದ್ದೇಶದಿಂದ ವಿಮಾನ ನಿಲ್ದಾಣಗಳು ಇಲ್ಲದ ಜಿಲ್ಲೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಏರ್ ಸ್ಟ್ರಿಪ್ ನಿರ್ಮಾಣಕ್ಕೆ ಕ್ರಮ ಕೈಗೊಂಡಿದೆ. ಅಂತೆಯೇ ರಾಜ್ಯದ ಮೂರು ಕಡೆ ಏರ್ ಸ್ಟ್ರಿಪ್ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದ್ದು, ಈಗಾಗಲೇ ಎರಡು ಜಿಲ್ಲೆಗಳಲ್ಲಿ ಜಾಗವನ್ನು ಕೂಡ ಗುರುತಿಸಲಾಗಿದೆ.
ಇನ್ನು ಸಾರ್ವಜನಿಕ ವಾಯು ಸೇವೆ ನೀಡಲು ಬಳಸದೆ ಖಾಸಗಿ ಅಥವಾ ಸರ್ಕಾರಿ ಕಾರ್ಯದ ವಿಮಾನಗಳ ಇಳಿಸುವಿಕೆ ಮತ್ತು ಹಾರಾಟಕ್ಕೆ ಮಾತ್ರ ಬಳಕೆಯಾಗುವಂತೆ ರಾಜ್ಯದ ಮೂರು ಕಡೆ ಏರ್ ಸ್ಟ್ರಿಪ್ ನಿರ್ಮಾಣ ಮಾಡಲು 2023 -24 ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿತ್ತು. ಅಂತೆಯೇ ಚಿಕ್ಕಮಗಳೂರು, ಕೊಡಗಿನಲ್ಲಿ ಏರ್ ಸ್ಟ್ರಿಪ್ ಜಾಗ ಗುರುತಿಸಲಾಗಿದ್ದು, ಧರ್ಮಸ್ಥಳದಲ್ಲಿ ಕೂಡಾ ಜಾಗ ಗುರುತಿಸಲಾಗುತ್ತಿದೆ.