Sat. Dec 28th, 2024

Bajire: ಜಾಗದ ವಿಷಯದಲ್ಲಿ ಎರಡು ಕುಟುಂಬಗಳ ನಡುವೆ ಹೊಡೆದಾಟ – ಪರಸ್ಪರ ಆರೋಪಿಸಿ ಪೊಲೀಸರಿಗೆ ದೂರು

ಬಜಿರೆ:(ಡಿ.27) ಜಾಗದ ಪಾಲಿನ ವಿಷಯದಲ್ಲಿ ಎರಡು ಕುಟುಂಬಗಳ ನಡುವೆ ನಡೆದ ಹೊಡೆದಾಟದಲ್ಲಿ ಎರಡು ಕಡೆಯವರು ಪರಸ್ಪರ ಆರೋಪ ಹೊರಿಸಿ ವೇಣೂರು ಪೊಲೀಸರಿಗೆ ದೂರು ನೀಡಿದ ಘಟನೆ ಡಿ. 25 ರಂದು ವರದಿಯಾಗಿದೆ.

ಇದನ್ನೂ ಓದಿ: ಬೆಳ್ತಂಗಡಿ: ಶಿರ್ತಾಡಿ & ಕಾಶಿಪಟ್ಣದ ನದಿಯಲ್ಲಿ ಕೆಮಿಕಲ್ ಹಾಕಿ ಮೀನು ಹಿಡಿಯುವ ಖದೀಮರು..!


ಬಜಿರೆ ಗ್ರಾಮದ ಪದ್ಮನಿಲಯ ನಿವಾಸಿ ರತ್ನರಾಜ್ ಪಡಿವಾಳ್ ಅವರು ನೀಡಿರುವ ದೂರಿನಲ್ಲಿ ಡಿ. 25 ರಂದು ಮಧ್ಯಾಹ್ನ ತಾನು ಬಜಿರೆ ಗ್ರಾಮದ ಬಾಡಾರು ತೋಟದಲ್ಲಿ ದನಗಳನ್ನು ಮೇಯಿಸುತ್ತಿರುವ ಸಮಯ ಸ್ವರಾಜ್, ಆಶಿಕ್, ಅನಿತಾ, ಆಶಿಕ್ ಹಾಗೂ ಸ್ವರ್ಣ ಲತಾ ಅಕ್ರಮವಾಗಿ ತನ್ನನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವುದಾಗಿ ಆರೋಪಿಸಿದ್ದಾರೆ.

ಹಲ್ಲೆಗೆ ಒಳಗಾದ ಅವರು ಗುರುವಾಯನಕೆರೆ ಆಸ್ಪತ್ರೆಗೆ ದಾಖಲಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನೊಂದು ಕುಟುಂಬದ ಸ್ವರಾಜ್ ಜೈನ್ ನೀಡಿರುವ ದೂರಿನಲ್ಲಿ ತಮಗೆ ಜಮೀನಿನ ಪಾಲಿನ ವಿಚಾರದಲ್ಲಿ ತಕರಾರು ಆಗಿ ಮನಸ್ತಾಪವಿದ್ದು, ಡಿ. 25 ರಂದು ಮಧ್ಯಾಹ್ನ ತಾನು ತನ್ನ ತಾಯಿ ಹಾಗೂ ಅತ್ತೆಯ ಮಗ ಅಶಿಕ್ ಮತ್ತು ಪತ್ನಿಯೊಂದಿಗೆ ಬೆಂಗಳೂರಿನಿಂದ ತನ್ನ ಮನೆ ಬಜಿರೆ ಗ್ರಾಮದ ಬಾಡಾರಿಗೆ

ಬಂದು ಮನೆಯಲ್ಲಿ ಕರೆಂಟ್ ಇಲ್ಲ ಎಂದು ವಿದ್ಯುತ್ ಮೀಟರ್ ಬೋರ್ಡು ಬಳಿ ಪ್ಯೂಸ್ ಹಾಕಲು ಹೋಗುವ ಸಮಯ ರತ್ನರಾಜ ಪಡಿವಾಲ್ ತನಗೆ ಅವಾಚ್ಯ ಶಬ್ದಗಳಿಂದ ಬೈದು ಕುತ್ತಿಗೆಯನ್ನು ಗಟ್ಟಿಯಾಗಿ ಹಿಡಿದು ಕೋಲಿನಿಂದ ಹಲ್ಲೆ ನಡೆಸಿದ್ದು, ಗಲಾಟೆ ಬಿಡಿಸಲು ಹೋದ ತನ್ನ ತಾಯಿಯನ್ನು ದೂಡಿ ಹಾಕಿ, ತನಗೆ ಕೈಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಿದ್ದಾರೆ.


ವೇಣೂರು ಠಾಣೆಯಲ್ಲಿ ಎರಡು ಕಡೆಯ ದೂರುಗಳನ್ನು ಸ್ವೀಕರಿಸಿ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *