ಬಂಟ್ವಾಳ :(ಡಿ.27) ಬಂಟ್ಟಾಳ ಯುವವಾಹಿನಿ ಘಟಕದ ವತಿಯಿಂದ ನಡೆಯುತ್ತಿರುವ ವಾರಕ್ಕೊಂದು ಗುರುತತ್ವವಾಹಿನಿ ಕಾರ್ಯಕ್ರಮದ 26 ನೇ ಮಾಲಿಕೆ ಬಂಟ್ವಾಳ ಯುವವಾಹಿನಿ ಆರೋಗ್ಯ ನಿರ್ದೇಶಕರಾದ ಮಹೇಶ್ ಬೊಳ್ಳಾಯಿ ಇವರ ಮನೆಯಲ್ಲಿ ನಡೆಯಿತು.
ಇದನ್ನೂ ಓದಿ: ಬೆಳ್ತಂಗಡಿ: “ಸಫರೇ ತಕ್‌ರೀಮ್” – ಕಾಜೂರಿನಲ್ಲಿ ಚಾಲನೆ
ಬಂಟ್ಟಾಳ ಯುವವಾಹಿನಿ ಘಟಕದ ಮಾಜಿ ಅಧ್ಯಕ್ಷರಾದ ರಾಜೇಶ್ ಸುವರ್ಣ ಗುರು ಸಂದೇಶ ನೀಡಿ ಯಾವುದೇ ಸಮಾಜವು ಹಳೆಯ ಅನಗತ್ಯ ಜಾಡ್ಯಗಳನ್ನು ಬಿಟ್ಟು ಬಿಡಲು ಮತ್ತು ಹೊಸತನವನ್ನು ರೂಢಿಸಿಕೊಳ್ಳಲು ಶಿಕ್ಷಣವೇ ಏಕಮಾತ್ರ ಮಾಧ್ಯಮ ಎಂದು ನಾರಾಯಣಗುರುಗಳು ಪ್ರತಿಪಾದಿಸಿದರು ಎಂದು ತಿಳಿಸುತ್ತಾ,
ಮಗುವಿನಲ್ಲಿ ಉತ್ತಮ ಸಂಸ್ಕಾರಗಳನ್ನು ರೂಢಿಸಬೇಕಾದರೆ ತಾಯಿ ವಿದ್ಯಾವಂತೆಯೂ, ಪ್ರಜ್ಞಾವಂತೆಯೂ, ಸುಸಂಸ್ಕೃತಳೂ, ಧರ್ಮಬೀರುವೂ ಆಗಬೇಕು. ಅಂತಹ ತಾಯಂದಿರಿಂದ ಉತ್ತಮ ವಿದ್ಯಾವಂತ, ಪ್ರಜ್ಞಾವಂತ ವ್ಯಕ್ತಿಗಳಿಂದ ಕೂಡಿದ ಸಮಾಜ ನಿರ್ಮಾಣ ಸಾಧ್ಯ. ಆಕೆಗೆ ಉತ್ತಮ ಶಿಕ್ಷಣ ಅನಿವಾರ್ಯತೆಯ ಅಗತ್ಯವಿದೆ ಎಂದು ಗುರುಗಳು ಪ್ರತಿಪಾದಿಸಿದರು.
ಗುರುಗಳು ಪ್ರತಿಷ್ಠೆ ಮಾಡಿದ ಪ್ರತಿ ದೇವಸ್ಥಾನ ಸುತ್ತಮುತ್ತ ಶಾಲೆಗಳನ್ನು ತೆರೆಯಲು ಮೊದಲ ಆದ್ಯತೆ ಕೊಡುತ್ತಿದ್ದರು. ಸಮಾಜದ ಪ್ರತಿ ವರ್ಗದವರು ವಿದ್ಯಾವಂತರಾಗಬೇಕು ಎನ್ನುವುದು ಅವರ ಶಿಕ್ಷಣ ನೀತಿಯಾಗಿತ್ತು. 42 ಕ್ಕೂ ಹೆಚ್ಚು ರಾತ್ರಿ ಶಾಲೆ ಸ್ಥಾಪಿಸಿದರು ಎಂಬುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ,ಉಪಾಧ್ಯಕ್ಷರಾದ ನಾರಾಯಣ ಪಲ್ಲಿಕಂಡ, ನಿರ್ದೇಶಕರಾದ, ಉದಯ್ ಮೆನಾಡ್, ಮಧುಸೂದನ್ ಮಧ್ವ,ನಿಕಟಪೂರ್ವ ಅಧ್ಯಕ್ಷರಾದ ಹರೀಶ್ ಕೊಟ್ಯಾನ್ ಕುದನೆ,ಮಾಜಿ ಅಧ್ಯಕ್ಷರಾದ ನಾಗೇಶ್ ಪೊನ್ನೋಡಿ, ಗಣೇಶ್ ಪೂಂಜರೆಕೋಡಿ, ಪ್ರೇಮನಾಥ್ ಕೆ, ಶಿವಾನಂದ ಎಂ, ರಾಜೇಶ್ ಸುವರ್ಣ, ಅರುಣ್ ಕುಮಾರ್, ಸದಸ್ಯರಾದ, ಪ್ರಶಾಂತ್ ಏರಮಲೆ,ಹರೀಶ್ ಅಜೆಕಲಾ , ಅರ್ಜುನ್ ಅರಳ , ಅಶ್ವಿನ್ ಬೊಳ್ಳಾಯಿ, ವಿಘ್ನೇಶ್ ಬೊಳ್ಳಾಯಿ,ಶ್ರಜನಿ ನಗ್ರಿ,ನಿಕೇಶ್ ಕೊಟ್ಯಾನ್, ಯಶೋಧರ ಕಡಂಬಲ್ಕೆ,ಸಂಕೇತ್ ಅರಳ, ನಿಕಿತಾ ಬೊಳ್ಳಾಯಿ,ಮತ್ತಿತರರು ಉಪಸ್ಥಿತರಿದ್ದರು.
ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾದ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ ವಂದಿಸಿದರು.