ಬಂಟ್ವಾಳ:(ಡಿ.27) ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಬಿಸಿ ಟ್ರಸ್ಟ್ (ರಿ.)ಬಂಟ್ವಾಳ ಇದರ . ಪಾಣೆಮಂಗಳೂರು ವಲಯದ ಸಜಿಪಮುಡ ಒಕ್ಕೂಟ ಕಾರ್ಯಕ್ಷೇತ್ರದ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಜಿಪಮೂಡ ಇಲ್ಲಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನದೀಪ ಕಾರ್ಯಕ್ರಮದ ಅಡಿಯಲ್ಲಿ ಮಂಜೂರಾದ.10 ಜೊತೆ ಬೆಂಚ್ ಡೆಸ್ಕ್ ವಿತರಣಾ ಕಾರ್ಯಕ್ರಮ ನಡೆಸಲಾಯಿತು.
ಇದನ್ನೂ ಓದಿ: ಕುಂದಾಪುರ: ಪಂಪ್ ಸ್ವಿಚ್ ಆಫ್ ಮಾಡಲು ಹೋದ ಯುವತಿ ಬಾವಿಗೆ ಬಿದ್ದು ಸಾವು
ಕಾರ್ಯಕ್ರಮವನ್ನು ಸಜಿಪಮುಡ ಗ್ರಾಮ ಪಂಚಾಯತ್ ಮಾಜಿ ಆಧ್ಯಕ್ಷರಾದ ದೇವಿಪ್ರಸಾದ್ ಪೂಂಜಾ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸಜಿಪಮುಡ ಗ್ರಾಮ ಪಂಚಾಯತ್ ಸದಸ್ಯರಾದ ಹೇಮಾವತಿ. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ವತ್ಸಲ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಸೌಮ್ಯ ಸದಸ್ಯರಾದ ಸಮಿಮ್, ಮಲ್ಲಿಕಾ, ಶಾಯಿದ , ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ಬಬಿತ ಸ್ವಾಗತಿಸಿ, ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಮಮತಾ ವಂದಿಸಿ, ವಲಯ ಮೇಲ್ವಿಚಾರಕಿ ಅಮಿತ ಕಾರ್ಯಕ್ರಮ ನಿರೂಪಿಸಿದರು.