ಬೆಳ್ತಂಗಡಿ: (ಡಿ.27) ದೇಶದ ಆರ್ಥಿಕತೆಗೆ ವಿಶೇಷ ಚೈತನ್ಯ ತಂದ ಭಾರತದ ಹೆಮ್ಮೆಯ ಪ್ರಧಾನಿ ಡಾ. ಮನಮೋಹನ್ ಸಿಂಗ್ ತಮ್ಮ ಅರ್ಥಶಾಸ್ತ್ರದ ವಿಚಾರಧಾರೆಗಳಿಂದ ಭಾರತದ ಗರಿಮೆಯನ್ನು ಹೆಚ್ಚಿಸಿದ್ದ ಇವರ ಅಗಲಿಕೆಯಿಂದ ದೇಶವು ಮಹಾನ್ ಸಾಧಕರನ್ನು ಕಳೆದುಕೊಂಡಿದೆ.
ಇದನ್ನೂ ಓದಿ: ಕುಂದಾಪುರ: ಪಂಪ್ ಸ್ವಿಚ್ ಆಫ್ ಮಾಡಲು ಹೋದ ಯುವತಿ ಬಾವಿಗೆ ಬಿದ್ದು ಸಾವು
ದೇಶದ ಆರ್ಥಿಕತೆಗೆ ಮನಮೋಹನ್ ಸಿಂಗ್ ನೀಡಿದ ಕೊಡುಗೆ ಅಪಾರ. ಹಲವಾರು ಶಾಸನಬದ್ಧ ಕಾರ್ಯಕ್ರಮಗಳ ಮೂಲಕ ಅವರು ದೇಶದ ಪ್ರಗತಿಗೆ ಶ್ರಮಿಸಿದ್ದಾರೆ.ಸರಳ ಹಾಗೂ ಪ್ರಾಮಾಣಿಕ ವ್ಯಕ್ತಿಯಾಗಿದ್ದ ಮನಮೋಹನ್ ಸಿಂಗ್ ಅವರ ಅಗಲಿಕೆಯಿಂದ ಇಡೀ ದೇಶಕ್ಕೆ ನಷ್ಟವಾಗಿದ್ದು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
ಅವರ ಬದುಕು ಮತ್ತು ಅವರು ಮಾಡಿದ ಕೆಲಸಗಳು ನಮಗೆ ಸದಾ ಪ್ರೇರಣೆಯಾಗಿದೆ ಎಂದು ಬೆಳ್ತಂಗಡಿ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿಯಾದ ರಮೀಝ್ ರಾಝ ರವರು ತಿಳಿಸಿದರು.