ಬೆಳ್ತಂಗಡಿ:(ಡಿ.27) ಹಣಕಾಸು ಸಚಿವರಾಗಿ, ರಿಸರ್ವ್ ಬ್ಯಾಂಕ್ ಗೌವರ್ನರ್ ಆಗಿ, ಸತತ 10 ವರ್ಷಗಳ ಕಾಲ ಪ್ರಧಾನ ಮಂತ್ರಿಯಾಗಿ ತಮ್ಮ ಜ್ಞಾನ ಮತ್ತು ಬದ್ಧತೆ ಮೂಲಕ ದೇಶಕ್ಕೆ ಸೇವೆ ಸಲ್ಲಿಸಿದ ವಿಶ್ವ ಕಂಡಂತಹ ಶ್ರೇಷ್ಠ ಆರ್ಥಿಕ ತಜ್ಞರಾದ ಡಾ. ಮನಮೋಹನ್ ಸಿಂಗ್ ಅವರು ಅಗಲಿದ ಸುದ್ದಿ ತಿಳಿದು ಅತೀವ ದುಃಖವಾಯಿತು.
ಅವರು ಜಾರಿಗೆ ತಂದಂತಹ ಉದ್ಯೋಗ ಖಾತ್ರಿ ಮತ್ತು ಆಹಾರ ಭದ್ರತಾ ಕಾಯ್ದೆಯಂತಹ (Food Security Act), ಯೋಜನೆಗಳು ದೇಶದ ಕೋಟ್ಯಾಂತರ ಜನರ ಬಡತನವನ್ನು ನೀಗಿಸಿತು.
RTE ಶಿಕ್ಷಣ ಹಕ್ಕು ಕಾಯ್ದೆ (Right to Education ) ಬಡ ಮಕ್ಕಳಿಗೂ ಪ್ರತಿಷ್ಠಿತ ಶಾಲೆಗಳಲ್ಲಿ ಓದಲು ಅವಕಾಶ ಕಲ್ಪಿಸಿತು. RTI ಕ್ರಾಂತಿಕಾರಕವಾದ ಮಾಹಿತಿ ಹಕ್ಕು ಕಾನೂನು ಆಡಳಿತದಲ್ಲಿ ಪಾರದರ್ಶಕತೆಯನ್ನು ತಂದಿತು. ದೇಶಕ್ಕೆ ಕೊಡುಗೆಯಾಗಿರುವ ಅವರ ಸಾಧನೆಗಳು ಎಂದಿಗೂ ಅಜರಾಮರ.
ಮನಮೋಹನ್ ಸಿಂಗ್ ಅವರ ಆತ್ಮಕ್ಕೆ ಶಾಂತಿ ದೊರೆಯಲಿ, ಅವರ ಕುಟುಂಬವರ್ಗದವರಿಗೆ ಹಾಗೂ ಕೋಟ್ಯಂತರ ಅಭಿಮಾನಿ ಬಳಗದವರಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾದ ರಕ್ಷಿತ್ ಶಿವರಾಂ ಪ್ರಾರ್ಥಿಸಿದರು.