ಬೆಳ್ತಂಗಡಿ:(ಡಿ.27) ಪುತ್ತೂರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಮತ್ತು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವತಿಯಿಂದ ಡಿ.25ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ನಟರಾಜ ವೇದಿಕೆಯಲ್ಲಿ ಜರುಗಿದ “ಶ್ರೀ ಆಂಜನೇಯ-56″ರ ಸಮಾರಂಭದಲ್ಲಿ ಯಕ್ಷಗಾನ ಸಂಘಟಕ,
ಇದನ್ನೂ ಓದಿ: ಸುಳ್ಯ: ಕಾರಿಗೆ ಡೀಸೆಲ್ ಹಾಕಿಸಿ ದುಡ್ಡು ಕೊಡದೇ ಪರಾರಿಯಾದ ಚಾಲಕ!!!
ಅಪೂರ್ವ ಧ್ವನಿಸುರುಳಿಗಳ ನಿರ್ಮಾಪಕ, ಅನನ್ಯ ತಾಳಮದ್ದಲೆಗಳ ರೂವಾರಿ, ನಿವೃತ್ತ ಜಮಾ ಉಗ್ರಾಣ ಮುತ್ಸದ್ದಿ ಭುಜಬಲಿ ಧರ್ಮಸ್ಥಳ ಅವರಿಗೆ “ಶ್ರೀ ಯಕ್ಷಾಂಜನೇಯ ಪ್ರಶಸ್ತಿ” ನೀಡಿ ಅಭಿನಂದಿಸಲಾಯಿತು.
ಸ್ವರ್ಣೋದ್ಯಮಿ, ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ವೇ.ಮೂ. ಹರಿನಾರಾಯಣದಾಸ ಅಸ್ರಣ್ಣ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್,
ಹಿರಿಯ ಅರ್ಥಧಾರಿ ಪ್ರಭಾಕರ ಜೋಶಿ, ವಿನಯ ಕುಮಾರ್, ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ, ಕಾರ್ಯದರ್ಶಿ ಆನಂದ ಸವಣೂರು, ಕೋಶಾಧಿಕಾರಿ ದುಗ್ಗಪ್ಪ ಎನ್ ಮೊದಲಾದವರು ಉಪಸ್ಥಿತರಿದ್ದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ದಿವಾಕರ ಆಚಾರ್ಯ ಗೇರುಕಟ್ಟೆ ಭುಜಬಲಿ ಧರ್ಮಸ್ಥಳ ಅವರನ್ನು ಅಭಿನಂದಿಸಿದರು.