ಬೆಳ್ತಂಗಡಿ:(ಡಿ.27) ದರ್ಸ್ ರಂಗದಲ್ಲಿ ನಾಲ್ಕು ದಶಕ ಪೂರೈಸಿದ ಅಸ್ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್ ರವರಿಗೆ ಶಿಷ್ಯಂದಿರು ನೀಡುವ ‘ಅತ್ತಕ್‌ರೀಮ್’ ಗೌರವಾರ್ಪಣೆಯ ಪ್ರಚಾರಾರ್ಥ ಮದನೀಯಂ ಅಬ್ದುಲ್ಲತೀಫ್ ಸಖಾಫಿ ಮುನ್ನಡೆಸುವ ‘ಸಫರೇ ತಕ್‌ರೀಮ್’ ಗೆ ಕಾಜೂರು ದರ್ಗಾ ವಠಾರದಲ್ಲಿ ಚಾಲನೆ ನೀಡಲಾಯಿತು.
ಇದನ್ನೂ ಓದಿ: ಉಪ್ಪಿನಂಗಡಿ: ಉಪ್ಪಿನಂಗಡಿ ಬಸ್ ಸ್ಟ್ಯಾಂಡ್ ಬಳಿಯ ಬೇಕರಿ ಬೆಂಕಿಗಾಹುತಿ!!!!
ಕಾಜೂರು ಮುದರ್ರಿಸ್ ತೌಸೀಫ್ ಸಅದಿ ಹರೇಕಳ ಝಿಯಾರತ್ ನೇತೃತ್ವ ನೀಡಿದರು. ನಂತರ ಮಾತನಾಡಿದ ಅಬ್ದುಲ್ಲತೀಫ್ ಸಖಾಫಿ, ಹಸನುಲ್ ಅಹ್ದಲ್ ತಂಙಳ್ ರವರು ಸೇವಾ ಬದುಕಿಗೆ ಕಾಲಿಟ್ಟದ್ದು ಈ ಕಾಜೂರಿನಿಂದಲೇ. ಆ ಕಾರಣದಿಂದಲೇ ಈ ಯಾತ್ರೆಗೆ ಕಾಜೂರನ್ನೇ ಆಯ್ಕೆ ಮಾಡಲಾಗಿದ್ದು, ಕಾರ್ಯಕ್ರಮದ ಯಶಸ್ವಿಗೆ ನಿಮ್ಮೆಲ್ಲರ ಸಹಕಾರ ಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ರಹ್ಮಾನಿಯಾ ಜುಮಾ ಮಸ್ಜಿದ್ ಹಾಗೂ ದರ್ಗಾ ಶರೀಫ್ ಕಾಜೂರು ಇದರ ಅಧ್ಯಕ್ಷ ಕೆ.ಯು ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿ ಅಬೂಬಕರ್ ಸಿದ್ದೀಕ್ ಜೆ.ಎಚ್, ಕೋಶಾಧಿಕಾರಿ ಕಮಾಲ್ ಕಾಜೂರು, ಆಡಳಿತ ಸಮಿತಿ ಮಾಜಿ ಕೋಶಾಧಿಕಾರಿ ಅಬ್ಬಾಸ್ ಜೆ.ಎಚ್, ಆಡಳಿತ ಮಂಡಳಿ ಸದಸ್ಯರಾದ ಸಿದ್ದೀಕ್ ಕೆ.ಎಚ್, ಎಸ್‌ವೈಎಸ್ ಕಾಜೂರು ಯುನಿಟ್ ಅಧ್ಯಕ್ಷ ಹೈದರಾಲಿ ಕಾಜೂರು, ಎಸ್ಸೆಸ್ಸೆಫ್ ಕಾಜೂರು ಸೆಕ್ಟರ್ ಅಧ್ಯಕ್ಷ ನಿಝಾಮುದ್ದೀನ್ ಜೆ.ಎಚ್, ಎಸ್ಸೆಸ್ಸೆಫ್ ಕಾಜೂರು ಯೂನಿಟ್ ಅಧ್ಯಕ್ಷ ಜಬ್ಬಾರ್ ಕಾಜೂರು ಮುಂತಾದವರು ಉಪಸ್ಥಿತರಿದ್ದರು. ರ್ಯಾಲಿಗೆ ನೇತೃತ್ವ ನೀಡುತ್ತಿರುವ ಅಬ್ದುಲ್ಲತೀಫ್ ಸಖಾಫಿಯವರನ್ನು ಕಾಜೂರು ಆಡಳಿತ ಸಮಿತಿಯಿಂದ ಗೌರವಿಸಲಾಯಿತು.