ಚಿಕ್ಕಮಗಳೂರು:(ಡಿ.27) ದತ್ತಪೀಠದಲ್ಲಿ ಯಾವದೇ ಹೊಸ ಆಚರಣೆ ಮಾಡಬಾರದು ಎಂದು ನಿಯಮವಿದ್ದರೂ ಸಹ ಗ್ಯಾರವಿ ಆಚರಣೆಗೆ ಮುಸ್ಲಿಮರಿಗೆ ಅವಕಾಶ ನೀಡಿರೋದು ಕಾನೂನು ಉಲ್ಲಂಘನೆಯಾಗಿದೆ. ಎಂದು ದತ್ತಪೀಠ ಮುಕ್ತಿ ಹೋರಾಟ ಸಮಿತಿ ಸಕಲೇಶಪುರ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಅಮಾನತ್ತಿಗೆ ಮನವಿ ಮಾಡಿದ್ದಾರೆ.
ಗ್ಯಾರವಿ ಎಂದರೆ ಪ್ರಾಣಿಬಲಿ ಕೊಡೋದು ಪೀಠದ ಪಕ್ಕದ ಕಲ್ಯಾಣಿ ಇರುವ ಜಾಗದಲ್ಲಿ 22.12.24 ರಂದು ಕುರಿ ಕಡಿದು ಅಲ್ಲೇ ಊಟ ಮಾಡಿ ದತ್ತಪೀಠದ ಆವರಣವನ್ನು ಕಲುಷಿತಗೊಳಿಸಿದ್ದು. ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದ್ದು ಈ ರೀತಿಯ ಯಾವದೇ ಆಚರಣೆಗೆ ಅವಕಾಶವಿಲ್ಲದಿದ್ದರೂ ಸಹ ಗ್ಯಾರವಿಗೆ ಅನುಮತಿ ನೀಡಿರೋದು ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದ್ದಾರೆ ಜಿಲ್ಲಾಧಿಕಾರಿಗಳು.
ನ್ಯಾಯಾಲಯದ ಆದೇಶದಂತೆ ದತ್ತಪೀಠದ ಆವರಣದಲ್ಲಿ ಮಾಂಸಾಹಾರ ಮಾಡಬಾರದು ಎಂಬ ಆದೇಶವಿದ್ದರೂ ಸಹ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಗ್ಯಾರವಿ ಆಚರಣೆಗೆ ಅನುಮತಿ ನೀಡಿ ಕಾನೂನು ಉಲ್ಲಂಘಿಸಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ವಿಶ್ವ ಹಿಂದೂ ಪರಿಷದ್ ವತಿಯಿಂದ ತಕರಾರು ಸಲ್ಲಿಸಿದ್ದರು ಸಹ ಅರ್ಜಿ ಪರಿಗಣಿಸದೆ ಗ್ಯಾರವಿಗೆ ಅನುಮತಿ ನೀಡಿ ಪ್ರಾಣಿಬಲಿಗೆ ನೇರವಾಗಿ ಜಿಲ್ಲಾದಿಕಾರಿಗಳೇ ಕುಮ್ಮಕ್ಕು ನೀಡಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ದತ್ತಜಯಂತಿ ಹಿಂದೂಗಳ ಕಾರ್ಯಕ್ರಮ ಎಂದು ನಿರ್ಲಕ್ಷ ಮಾಡಿ ಯಾವದೇ ಧಾರ್ಮಿಕ ವಿಧಿಗಳನ್ನ ನಿಗದಿತ ಸ್ಥಳದಲ್ಲಿ ಮಾಡಲು ವಿರೋಧಿಸಿ ಸರ್ಕಾರದಿಂದ ಅನುಮತಿ ಪಡಿಯಬೇಕು ಎಂದು ಹಾರೈಕೆ ಉತ್ತರ ನೀಡಿ ಪೂರಕವಾಗಿ ಸ್ಪಂದಿಸದೆ ದತ್ತಪೀಠಕ್ಕೆ ಬರುವ ಹಿಂದೂ ಶ್ರದ್ದಾಳುಗಳಿಗೆ ಸೂಕ್ತ ಮೂಲಭೂತ ವ್ಯವಸ್ಥೆ ಮಾಡದೇ ವಂಚಿಸಿದ್ದಾರೆ.
ಗ್ಯಾರವಿ ಆಚರಣೆ ಮಾಡಲು ಅವಕಾಶ ನೀಡಿರುವ ಜಿಲ್ಲಾಧಿಕಾರಿಗಳ ನಡೆ ಹಲವು ಅನುಮಾನಗಳಿಗೆ ಕಾರಣವಾಗುತ್ತಿದ್ದು. ತಕ್ಶಣ ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದೆ ದತ್ತಪೀಠ ಮುಕ್ತಿ ಹೋರಾಟ ಸಮಿತಿ ಸಕಲೇಶಪುರ
ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಕಲೇಶಪುರ ಉಪವಿಭಾಗದ ಉಪವಿಭಾಗಾಧಿಕಾರಿಗಳ ಕಚೇರಿಯಿಂದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ರವಾನೆ ಮಾಡಲು ಮನವಿ ಮಾಡಲಾಯಿತು ಈ ಸಂದರ್ಭದಲ್ಲಿ ರಘು ಸಕಲೇಶಪುರ ದತ್ತಪೀಠ ಮುಕ್ತಿ ಹೋರಾಟ ಸಮಿತಿ ಸಕಲೇಶಪುರ ಸಂಚಾಲಕ ಶಿವೂ ಮತ್ತು ಮಂಜು ಕಬ್ಬಿನಗದ್ದೆ, ಕೌಶಿಕ್, ರವಿ ಹೆಬ್ಬಸಾಲೆ, ವಸಂತ್ ಶೆಟ್ಟಿಹಳ್ಳಿ, ಧರ್ಮೇಶ್ ಹಾಜರಿದ್ದರು.