ಕುಂದಾಪುರ:(ಡಿ.27) ಪಂಪ್ ಸ್ವಿಚ್ ಆಫ್ ಮಾಡಲು ಹೋದ ಯುವತಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಕಾಳಾವರ ಗ್ರಾಮದ ಸಳ್ಳಾಡಿಯಲ್ಲಿ ನಡೆದಿದೆ. ಮುಗ್ಧ ಯು (25) ಮೃತ ಯುವತಿ.
ಮುಗ್ಧ ಮಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದರು. ಬುಧವಾರ, ಡಿಸೆಂಬರ್ 25 ರಂದು ಕ್ರಿಸ್‌ಮಸ್ ರಜೆಗೆ ಕಾಳಾವರ ಗ್ರಾಮದ ಸಳ್ಳಾಡಿಯ ತನ್ನ ಮನೆಗೆ ಬಂದಿದ್ದರು.
ಮನೆಯಲ್ಲಿರುವಾಗ ರಾತ್ರಿ 10:30 ಗಂಟೆ ಸಮಯಕ್ಕೆ ಮನೆಯ ಬಾವಿಯ ಬಳಿಯಿರುವ ಪಂಪ್ ಸ್ವಿಚ್ ಆಫ್ ಮಾಡಲು ಬಾವಿಯ ಬಳಿಗೆ ಹೋಗಿದ್ದಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾರೆ. ಬಿದ್ದ ಶಬ್ದ ಕೇಳಿ ಮನೆಯವರು, ನೆರೆಕರೆಯವರು ಮತ್ತು
ಅಗ್ನಿಶಾಮಕ ದಳದವರ ಸಹಾಯದಿಂದ ಬಾವಿಯ ನೀರಿನಲ್ಲಿ ಹುಡುಕಾಡಿದಲ್ಲಿ ಡಿಸೆಂಬರ್ 26 ರಂದು ಮುಗ್ಧಳ ದೇಹವು ಮೃತ ಪಟ್ಟಿರುವ ಸ್ಥಿತಿಯಲ್ಲಿ ದೊರೆತಿದೆ.ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.