ಮಂಗಳೂರು:(ಡಿ.27) ಹೊಸ ವರ್ಷಾಚರಣೆಗೆ ದಿನಗಣನೆ ಶುರುವಾಗಿದೆ. ಪಾರ್ಟಿಗಳ ಆಯೋಜನೆ ಕೂಡ ನಡೆಯುತ್ತಿದೆ. ಆದ್ರೆ ಮಂಗಳೂರಿನಲ್ಲಿ ಹೊಸ ವರ್ಷ ಆಚರಣೆಗೆ ಹಿಂದೂ ಸಂಘಟನೆ ವಿರೋಧ ವ್ಯಕ್ತಪಡಿಸಿದೆ. ಪಾರ್ಟಿ ನಡೆಸಿದ್ರೆ ದಾಳಿ ಮಾಡುವ ಎಚ್ಚರಿಕೆಯನ್ನು ನೀಡಿದೆ.
ಇದನ್ನೂ ಓದಿ: Muslim Nation: ಮುಸ್ಲಿಂ ರಾಷ್ಟ್ರವಾಗಿ ಹೊರಹೊಮ್ಮಲಿದೆಯಂತೇ ಭಾರತ??!!
2024ಕ್ಕೆ ಬೈ ಬೈ ಹೇಳಿ 2025 ಕ್ಕೆ ಹಾಯ್ ಹಾಯ್ ಹೇಳೊಕೆ ಇನ್ನೂ ಕೆಲ ದಿನಗಳಷ್ಟೇ ಬಾಕಿ ಉಳಿದಿದೆ. ನ್ಯೂ ಇಯರ್ ಸೆಲೆಬ್ರೆಷನ್ ಅಂದ್ರೆ ಪಾರ್ಟಿ ಮೋಜು ಮಸ್ತಿ ಇದ್ದದ್ದೆ. ಈಗಾಗಲೇ ಪಾರ್ಟಿ ಆಯೋಜಕರು ಪಾರ್ಟಿಗೆ ಸಿದ್ದತೆ ನಡೆಸುತ್ತಿದ್ದಾರೆ. ಆದ್ರೆ ಕಡಲತಡಿ ಮಂಗಳೂರಿನಲ್ಲಿ ಹೊಸ ವರ್ಷದ ಪಾರ್ಟಿಗೆ ಹಿಂದೂ ಸಂಘಟನೆಗಳ ವಿರೋಧ ವ್ಯಕ್ತವಾಗಿದೆ..
ನ್ಯೂ ಇಯರ್ ಪಾರ್ಟಿಗೆ ನಡೆಸದಂತೆ ಮಂಗಳೂರಿನಲ್ಲಿ ವಿಶ್ವ ಹಿಂದೂ ಪರಿಷತ್ತು ಹಾಗೂ ಭಜರಂಗದಳ ಎಚ್ಚರಿಕೆ ನೀಡಿದೆ. ಪಾರ್ಟಿಗೆ ಅನುಮತಿ ನೀಡದಂತೆ ಪೊಲೀಸರಿಗೆ ಮನವಿ ಮಾಡುತ್ತೇವೆ. ನಮ್ಮ ಮನವಿ ಮೀರಿಯೂ ಪಾರ್ಟಿಗೆ ಅನುಮತಿ ನೀಡಿದಲ್ಲಿ ನಾವೇ ಪಾರ್ಟಿಯನ್ನು ನಿಲ್ಲಿಸುತ್ತೇವೆ ಅಂತ ಭಜರಂಗದಳ ಎಚ್ಚರಿಕೆ ನೀಡಿದೆ..
ಹೊಸ ವರ್ಷದ ಕಾರಣದಿಂದ ಮಂಗಳೂರಿಗೆ ಡ್ರಗ್ಸ್ ಸಾಗಾಟ ಆಗುತ್ತಿದೆ. ಪಾರ್ಟಿ ಹೆಸರಲ್ಲಿ ಸೆಕ್ಸ್ ಮಾಫೀಯಾ ನಡೆಯುತ್ತದೆ. ಕೇರಳದಿಂದ ಯುವಕರು ಬಂದು ಮಂಗಳೂರಿನಲ್ಲಿ ಪಾರ್ಟಿ ಮಾಡಿ, ಯುವತಿಯರ ಮಾನಹಾನಿ ಮಾಡುತ್ತಾರೆ. ಹೀಗಾಗಿ ಹೊಸ ವರ್ಷದ ಕಾರ್ಯಗಳಿಗೆ ಅನುಮತಿ ನೀಡಬಾರದು ಅಂತ ವಿಶ್ವ ಹಿಂದೂ ಪರಿಷತ್ತು ಆಗ್ರಹಿಸಿದೆ..
ಒಟ್ಟಿನಲ್ಲಿ, ಪ್ರತಿ ವರ್ಷ ಕೂಡ ಗ್ರ್ಯಾಂಡ್ ಪಾರ್ಟಿ ನಡೆಯುವ ಮಂಗಳೂರಿನಲ್ಲಿ ಈ ಬಾರಿ ಪಾರ್ಟಿಗೆ ಆತಂಕ ಎದುರಾಗಿದೆ.