ಬೆಳ್ತಂಗಡಿ:(ಡಿ.28) ಬೆಳ್ತಂಗಡಿ ತಾಲೂಕಿನ ಪೆರೋಡಿತ್ತಾಯಕಟ್ಟೆ ಸರಕಾರಿ ಶಾಲೆಯಲ್ಲಿ ಮಕ್ಕಳು ವಿವಿಧ ಜಾತಿಯ ಹೂವಿನ ಗಿಡಗಳನ್ನು ಕುಂಡಗಳಲ್ಲಿ ನೆಟ್ಟು ಆರೈಕೆ ಮಾಡುತ್ತಿದ್ದರು.
ಇದನ್ನೂ ಓದಿ:ಬೆಳ್ತಂಗಡಿ: ನಿಷೇಧಿತ ಮಾದಕ ವಸ್ತು ಮಾರಾಟಕ್ಕೆ ಯತ್ನ
ಬೆಳ್ತಂಗಡಿ ತಾಲೂಕಿನತೆಂಕ ಕಾರಂದೂರು ಗ್ರಾಮ ದ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಪೆರೊಡಿತ್ತಾಯಕಟ್ಟೆ ಇಲ್ಲಿ ಈ ಘಟನೆ ನಡೆದಿರುವಂತದ್ದು, ನಿನ್ನೆ ಮಾಜಿ ಪ್ರಧಾನಿ ಯವರ ನಿಧನ ರಾದ ಬಗ್ಗೆ ಸರಕಾರಿ ರಜೆ ಇದ್ದ ಕಾರಣ,
ಇಂದು ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದೆ ಶಾಲಾ ಮಕ್ಕಳು ನೆಟ್ಟು ಬೆಳಿಸಿದ ಹೂ ತೋಟವನ್ನು ಕಿಡಿಗೇಡಿಗಳು ಹಾಳುಮಾಡಿದ್ದಾರೆ.
ಗುರುವಾಯನಕೆರೆ -ಕಾರ್ಕಳ ಹೆದ್ದಾರಿ ರಸ್ತೆ ಪಕ್ಕದಲ್ಲೇ ಇರುವ ಈ ಸುಂದರ ಶಾಲೆಗೆ ಶಿಕ್ಷಕರು, ಮಕ್ಕಳು, ಅಭಿವೃದ್ಧಿ ಸಮಿತಿಯವರು, ಹಳೇ ವಿದ್ಯಾರ್ಥಿಗಳ ಸಂಘದವರು, ಊರ ವಿದ್ಯಾಭಿಮಾನಿಗಳು,ಈ ಶಾಲೆಯ ಅಭಿವೃದ್ಧಿ ಗೆ ಕೈ ಜೋಡಿಸಿರುತ್ತಾರೆ. ಸರಕಾರಿ ಶಾಲೆಗೆ, ತೊಂದರೆ ಸರಕಾರಿ ಶಾಲೆಗೆ ಇಂತಹ ನೀಚ ಕೆಲಸ ಮಾಡುದರಿಂದ ಕಿಡಿಗೇಡಿಗಳಿಗೆ ಲಾಭ ಏನು..
ಇಲ್ಲಿ ಮಕ್ಕಳು ತರಕಾರಿ ಗಿಡ, ಹಣ್ಣಿನ ಗಿಡ ಗಳನ್ನ ಕೂಡ ಬೆಳೆಸಿದ್ದಾರೆ. ಅದರ ಮೇಲೂ ಕಿಡಿಗೇಡಿಗಳ ಕಣ್ಣು ಬೀಳುವ ಸಾಧ್ಯತೆ ಇದೆ ಎಂಬ ಭಯದಿಂದ ಶಾಲಾ ಶಿಕ್ಷಕ ವೃಂದ ನಮಗೆ ರಕ್ಷಣೆ ಬೇಕು ಎಂದಿದ್ದಾರೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆ ಗೆ ದೂರು ನೀಡಲಾಗಿದ್ದು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.