ಬೆಳ್ತಂಗಡಿ:(ಡಿ.28) ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಇದರ ಜೇಸಿ ಸಪ್ತಾಹ ಕಾರ್ಯಕ್ರಮದಲ್ಲಿ ಕಳೆದ ಹಲವಾರು ವರ್ಷಗಳಿಂದ ಸಮಾಜಸೇವೆ ಮಾಡುತ್ತಿರುವ ಮುಳಿಯ ಜ್ಯುವೆಲ್ಸ್ ಸಂಸ್ಥೆಗೆ ಸೇವಾಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮುಳಿಯ ಸಂಸ್ಥೆಯ ಮ್ಯಾನೇಜರ್ ಲೋಹಿತ್ ಮತ್ತು ಸಿಬ್ಬಂದಿಗಳು ಪ್ರಶಸ್ತಿ ಸ್ವೀಕರಿಸಿದರು.
ಇದನ್ನೂ ಓದಿ: ಉಜಿರೆ: ಪದ್ಮಶ್ರೀ ಎಂಟರ್‌ಪ್ರೈಸಸ್‌ನ ದಿನಚರಿ ಪುಸ್ತಕ ಬಿಡುಗಡೆ
ರಾಜ್ಯದ ಪ್ರಸಿದ್ಧ ಚಿನ್ನಾಭರಣಗಳ ಮಳಿಗೆಗಳಲ್ಲೊಂದಾದ ಮುಳಿಯ ಜುವೆಲ್ಸ್ ಪರಿಶುದ್ಧತೆಗೆ ಹೆಸರುವಾಸಿ. ಚಿನ್ನಾಭರಣಗಳ ಉದ್ಯಮದೊಂದಿಗೆ ಸಮಾಜಸೇವೆ ನೀಡುತ್ತಿರುವ ಸಂಸ್ಥೆಯಾಗಿದೆ. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಕ್ರೀಡೆ, ಕಲೆ ಹೀಗೆ ಹತ್ತು ಹಲವು ಸ್ತರಗಳಲ್ಲಿ ಸಂಸ್ಥೆಯು ಪ್ರೋತ್ಸಾಹ ನೀಡುತ್ತಾ ಬರುತ್ತಿದೆ.
ಈ ಸಂದರ್ಭದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ರಂಜಿತ್ ಹೆಚ್ ಡಿ, ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್, ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್,
ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ, ಜೆಸಿಐ ವಲಯಾಧ್ಯಕ್ಷ ಗಿರೀಶ್ ಎಸ್.ಪಿ, ಉದ್ಯಮಿ ಪ್ರವೀಣ್ ಫರ್ನಾಂಡೀಸ್ ಹಳ್ಳಿಮನೆ, ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು, ಜೆಎಸಿ ನಿರ್ದೇಶಕ ಕಿರಣ್ ಕುಮಾರ್ ಶೆಟ್ಟಿ, ವಲಯ ಉಪಾಧ್ಯಕ್ಷ ಶಂಕರ್ ರಾವ್,
ಪೂರ್ವಾಧ್ಯಕ್ಷರಾದ ಸಂತೋಷ್ ಪಿ ಕೋಟ್ಯಾನ್ ಬಳಂಜ, ಚಿದಾನಂದ ಇಡ್ಯ, ವಸಂತ ಶೆಟ್ಟಿ ಶ್ರದ್ದಾ, ರವೀಂದ್ರ ಶೆಟ್ಟಿ ಸುರಭಿ, ಸುಭಾಶ್ಚಂದ್ರ ಎಂಪಿ, ಅಶೋಕ್ ಕುಮಾರ್ ಬಿ.ಪಿ, ಜೆಸಿ ಸಪ್ತಾಹ ಸಂಯೋಜಕಿ ಹೇಮಾವತಿ, ಲೇಡಿ ಜೆಸಿ ಸಂಯೋಜಕಿ ಶ್ರುತಿ ರಂಜಿತ್, ರಕ್ಷಿತ್ ಅಂಡಿಂಜೆ, ಶೈಲೇಶ್, ಪೂರ್ವಾಧ್ಯಕ್ಷರು ಜೆಸಿ ಪದಾಧಿಕಾರಿಗಳು, ಉಪಸ್ಥಿತರಿದ್ದರು.