ಚಿಕ್ಕಮಗಳೂರು :(ಡಿ.28) ಮದುವೆಯಾಗಿ ಒಂದು ತಿಂಗಳಲ್ಲೇ ನವವಧು ನೇಣಿಗೆ ಕೊರಳೊಡ್ಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೇರಿ ತಾಲೂಕಿನ ಲಿಂಗದಹಳ್ಳಿ ಹೋಬಳಿಯ ಗುಳ್ಳದಮನೆಯಲ್ಲಿ ನಡೆದಿದೆ.
ಇದನ್ನೂ ಓದಿ: ಬೆಂಗಳೂರು: ಗೆಳತಿಗೆ ಲೈಂಗಿಕ ಕಿರುಕುಳ
ಬಿಂದು (20ವ) ನೇಣು ಬಿಗಿದುಕೊಂಡು ಸಾವಿಗೆ ಶರಣಾದ ಯುವತಿ. ಒಂದು ತಿಂಗಳ ಹಿಂದೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಮೂಲದ ಬಿಂದು ಕುಮಾರ್ ಎಂಬವರನ್ನು ಬಿಂದು ವರಿಸಿದ್ದರು.
ಬಿಂದು ಹಾಸ್ಟೆಲ್ ನಲ್ಲಿದ್ದುಕೊಂಡು ಓದುತ್ತೀನಿ ಎಂದು ಪಟ್ಟು ಹಿಡಿದಿದ್ದಳು. ಆದರೆ ಮನೆಯಿಂದಲೇ ಓದುತ್ತೀನಿ ಎಂದು ಪತಿ ಹೇಳಿದ್ದರಿಂದ ಮನ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.