ಕೇರಳ:(ಡಿ.28) 16 ವರ್ಷದ ಬಾಲಕನ ಮೇಲೆ 19 ವರ್ಷದ ಯುವತಿಯೊಬ್ಬಳು ಲೈಂಗಿಕ ದೌರ್ಜನ್ಯ ಎಸಗಿದಂತಹ ವಿಚಿತ್ರ ಘಟನೆ ಕೇರಳದಲ್ಲಿ ಬೆಳಕಿಗೆ ಬಂದಿದ್ದು, ಈ ಆರೋಪದ ಮೇಲೆ ಆ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಡಿ ಇದೀಗ 19 ವರ್ಷದ ಯುವತಿಯೋರ್ವಳನ್ನು ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ.
ಏನಿದು ಘಟನೆ?
ಬೇರೆ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಯುವತಿಯ ಪೋಷಕರು ಬೈದು ಬುದ್ಧಿ ಹೇಳಿ ನಂತರ ಆಕೆಯನ್ನು ಪರಿಚಯಸ್ಥರ ಮನೆಯಲ್ಲಿ ಪೋಷಕರು ಆಕೆಯನ್ನು ಬಿಟ್ಟಿದ್ದರು. ಆದರೆ ಆ ಮನೆಯ ಬಾಲಕನನ್ನು ಪಾಲಕ್ಕಾಡ್, ಮೈಸೂರು ಸೇರಿದಂತೆ ವಿವಿಧ ಸ್ಥಳಗಳಿಗೆ ಕರೆದ್ಯೊಯ್ದು ಯುವತಿಯು ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ.
ಬಾಲಕನ ಪೋಷಕರು ನೀಡಿದ ದೂರಿನಡಿ ತನಿಖೆ ಕೈಗೊಂಡ ಪೊಲೀಸರು ಯುವತಿಯನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.