ಮಲ್ಪೆ :(ಡಿ.28) ಮಲ್ಪೆ ಮೀನುಗಾರಿಕೆ ಬಂದರಿನಿಂದ ಮೀನುಗಾರಿಕೆ ತೆರಳಿದ್ದ ಮೀನುಗಾರ ಸಮುದ್ರಕ್ಕೆ ಬಿದ್ದು ನಾಪತ್ತೆಯಾದ ಘಟನೆ ನಡೆದಿದೆ.
ಇದನ್ನೂ ಓದಿ: Video Viral: ಡಾ.ಮನಮೋಹನ್ ಸಿಂಗ್’ ಬದಲು ‘ಪ್ರಧಾನಿ ಮೋದಿ’ ನಿಧನ ಎಂದ ನ್ಯೂಸ್ ಆ್ಯಂಕರ್!!!
ಅಂಕೋಲಾ ತಾಲೂಕಿನ ಅಣ್ಣಕೃಷ್ಣ ತಿಮ್ಮಪ್ಪ (48) ನಾಪತ್ತೆಯಾದವರು.
ಡಿ. 25ರಂದು ಬೆಳಗ್ಗಿನ ಜಾವ ಅರಬ್ಬಿ ಸಮುದ್ರದಲ್ಲಿ 13 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ಕೆಲಸ ಮಾಡುತ್ತಿರುವಾಗ ಆಯತಪ್ಪಿ ಬೋಟಿನಿಂದ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು. ತಕ್ಷಣ ಜತೆಯಲ್ಲಿದ್ದವರು ಹುಡುಕಾಡಿದರೂ ಪತ್ತೆಯಾಗಲಿಲ್ಲ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.