ಉಡುಪಿ:(ಡಿ.28) ಗ್ರಾಹಕನ ಸೋಗಿನಲ್ಲಿ ಚಿನ್ನದ ಅಂಗಡಿಗೆ ಬಂದಿದ್ದ ಕಳ್ಳನೋರ್ವ ಚಿನ್ನದ ಸರವನ್ನು ಕದ್ದು ಪರಾರಿಯಾದ ಘಟನೆ ಕಾರ್ಕಳದಲ್ಲಿ ನಡೆದಿದೆ.

ಇದನ್ನೂ ಓದಿ: ಕುಣಿಗಲ್: ಸ್ವಾಗತ ಫಲಕಕ್ಕೆ ಡಿಕ್ಕಿ ಹೊಡೆದ ಖಾಸಗಿ ಬಸ್
ಕಾರ್ಕಳ ನಗರದ ರಥಬೀದಿಯಲ್ಲಿರುವ ಎಸ್.ಜಿ. ಅರ್ಕೆಡ್ ಬಳಿ ಈ ಘಟನೆ ನಡೆದಿದ್ದು, ಮೂವತ್ತು ಗ್ರಾಂ ಚಿನ್ನದ ಕರಿಮಣಿ ಸರವನ್ನು ಎಗರಿಸಿ ಕಳ್ಳ ಓಡಿ ಹೋಗಿದ್ದಾನೆ.

ಚಿನ್ನದ ಸರ ಖರೀದಿಸುವ ನೆಪದಲ್ಲಿ ಅಂಗಡಿಗೆ ಬಂದಿದ್ದ ಕಳ್ಳನಿಗೆ ಮಹಿಳಾ ಸಿಬ್ಬಂದಿ ಚಿನ್ನದ ಸರಗಳನ್ನು ತೋರಿಸುತ್ತಿದ್ದರು. ಈ ವೇಳೆ ಇದೇ ವೇಳೆ ಕೈಗೆ ಸಿಕ್ಕಿದ ಸರವನ್ನು ಎಳೆದು ಕಳ್ಳ ಪರಾರಿಯಾಗಿದ್ದಾನೆ.



ಎಲ್ಲರೂ ನೋಡುತ್ತಿದ್ದಂತೆಯೇ ಕಳ್ಳ ಓಡಿ ಹೋಗಿದ್ದು, ಕಳ್ಳತನದ ದೃಶ್ಯ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಳ್ಳನಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
