ಬಂದಾರು :(ಡಿ.29) ಬಂದಾರು ಗ್ರಾಮ ಓಟೆಚ್ಚಾರು ಪರಿಸರದಲ್ಲಿ ನಿನ್ನೆ ರಾತ್ರಿ ಒಂಟಿ ಸಲಗ ದಾಳಿ ನಡೆಸಿದೆ. ಅಲ್ಲಿನ ನಿವಾಸಿಗಳಾದ ಉಮರಬ್ಬ ಮತ್ತು ಅಬ್ದುಲ್ ರಝಾಕ್ ರವರ ಅಡಿಕೆ ಗಿಡ,
ಪೈಪ್ ಲೈನ್ ಹಾನಿ ಮಾಡಿದ್ದೂ, ನೀರಿನ ಬ್ಯಾರೆಲ್ ಅಪ್ಪಚ್ಚಿ ಮಾಡಿದ್ದೂ, ರಸ್ತೆ ಬದಿಯಲ್ಲಿದ್ದ ಮರವನ್ನು ಮಗುಚಿ ನಜ್ಜು ಗುಜ್ಜು ಮಾಡಿದ್ದೂ ಅಪಾರ ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.
ಆನೆ ದಾಳಿ ನಿರಂತರವಾಗಿ ನಡೀತಾ ಇದೆ, ಇದರಿಂದಾಗಿ ಕೃಷಿಕರಿಗೆ ಆತಂಕ ಹೆಚ್ಚಾಗಿದೆ.