Paracetamol:(ಡಿ.29) ಮಹಿಳೆಯೊಬ್ಬಳು ಪ್ಯಾರಸಿಟಮಾಲ್ ಮಾತ್ರೆಯ ಮಿತಿಮೀರಿದ ಸೇವನೆಯಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಇದನ್ನೂ ಓದಿ: Murudeshwara Beach: ಮುರುಡೇಶ್ವರದ ಕಡಲ ತೀರದಲ್ಲಿದ್ದ ಅನಧಿಕೃತ ಗೂಡಂಗಡಿಗಳ ತೆರವು ಕಾರ್ಯಾಚರಣೆ ಆರಂಭ
ಮೃತ ಮಹಿಳೆಯನ್ನು ಬ್ರಿಟನ್ ನ ವಿಡ್ನೆಸ್ ಪಟ್ಟಣದ ಲಾರಾ ಹಿಗ್ಗಿಸನ್ (30) ಎಂದು ಗುರುತಿಸಲಾಗಿದ್ದು, ಈಕೆ ನ್ಯುಮೋನಿಯಾದಿಂದ ಬಳಲುತ್ತಿದ್ದ ಮಹಿಳೆ ಹತ್ತಿರದ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯ ವೈದ್ಯರು ಇಂಟ್ರಾವೆನಸ್ ಟ್ಯೂಬ್ ಮೂಲಕ ಮೂರು ಬಾರಿ 1 ಗ್ರಾಂ ಪ್ರಮಾಣದಲ್ಲಿ ಪ್ಯಾರಾಸಿಟಿಮಲ್ ನೀಡಿದ್ದರು. ಕೇವಲ 40 ಕೆಜಿ ತೂಕವಿದ್ದ ಮಹಿಳೆಗೆ ಇಷ್ಟು ಪ್ರಮಾಣದಲ್ಲಿ ಪ್ಯಾರಾಸಿಟಮಲ್ ನೀಡಿರುವುದು ಆಕೆಯ ಸಾವಿಗೆ ಕಾರಣವಾಗಿದೆ.
ಲಾರಾ ಅವರ ಸಾವಿಗೆ ಕಾರಣವೆಂದರೆ ಸೆಪ್ಸಿಸ್, ಸಿರೋಸಿಸ್ ಮತ್ತು ಪ್ಯಾಂಕ್ರಿಯಾಟೈಟಿಸ್‌ನೊಂದಿಗೆ ಅಂಗಾಂಗ ವೈಫಲ್ಯ ಎಂದು ತಿಳಿದುಬಂದಿದೆ. ಚಿಕಿತ್ಸೆ ವೇಳೆ ಪ್ಯಾರಸಿಟಮಾಲ್ ಮಿತಿಮೀರಿದ ಸೇವನೆಯಿಂದಾಗಿ ಲಾರಾ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ಆಡಳಿತವು ಕಂಡುಹಿಡಿದಿದೆ.
ಹಾಗಿದ್ರೆ ಪ್ಯಾರಸಿಟಮಾಲ್ ಅಪಾಯಕಾರಿಯೇ ?
ಸಾಮಾನ್ಯವಾಗಿ ತಲೆನೋವು ಮತ್ತು ಜ್ವರಕ್ಕೆ ವೈದ್ಯರು ಪ್ಯಾರಸಿಟಮಾಲ್ ನ ಸೇವನೆ ಸಲಹೆ ನೀಡುತ್ತಾರೆ. ಆದ್ರೆ ಪ್ಯಾರೆಸಿಟಮಾಲ್ ಮಿತಿಮೀರಿದ ಸೇವನೆಯು ಯಕೃತ್ತು ಮತ್ತು ಮೂತ್ರಪಿಂಡದ ವೈಫಲ್ಯಕ್ಕೆ ಕಾರಣವಾಗಬಹುದು ಎನ್ನಲಾಗಿದೆ.