Wed. Jan 1st, 2025

Udupi: ಮದವೇರಿದ ಎರಡು ಗೂಳಿಗಳ ಕಾಳಗ – ಆಮೇಲೆ ಆಗಿದ್ದೇನು?

ಉಡುಪಿ:(ಡಿ.29) ಮದವೇರಿದ ಎರಡು ಗೂಳಿಗಳ ಕಾಳಗ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸುವಂತೆ ಮಾಡಿತ್ತು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ , ಈ ಘಟನೆ ನಡೆದಿದ್ದು , ಕೆಲ ಕಾಲ ಜನರು ಆತಂಕಗೊಂಡರು.

ಇದನ್ನೂ ಓದಿ: ಬೆಳಗಾವಿ: ಆಂಟಿ ಜತೆ ಲವ್ವಿಡವ್ವಿ

ಎರಡು ಗೂಳಿಗಳು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಕಾದಾಡಿಕೊಂಡ ಪರಿಣಾಮ ಗಂಗೊಳ್ಳಿಯ ಮ್ಯಾಂಗನೀಸ್‌ ರಸ್ತೆ ಸಮೀಪ ಮುಖ್ಯ ರಸ್ತೆಯಲ್ಲಿ ವಾಹನ ಸವಾರರು ಹಾಗೂ ಪಾದಚಾರಿಗಳು ಭಯಭೀತರಾದರು. ಈ ಗೂಳಿ ಕಾಳಗ ನೋಡುತ್ತಾ ಜನರು ರಸ್ತೆ ಬದಿಯಲ್ಲಿ ನಿಲ್ಲುವಂತಾಯಿತು.


ಬಳಿಕ ಪಂಪ್‌ಸೆಟ್‌ ಮೂಲಕ ನೀರು ಹಾಯಿಸಿ, ಪಟಾಕಿ ಸಿಡಿಸಿ ಗೂಳಿ ಕಾಳಗವನ್ನು ತಪ್ಪಿಸಲು ಸ್ಥಳೀಯರು ಹರಸಾಹಸಪಟ್ಟರು. ಇಷ್ಟಾದರೂ ಅವುಗಳನ್ನು ಬೇರ್ಪಡಿಸಲು ಸಾಧ್ಯವಾಗಲಿಲ್ಲ. ಸುಮಾರು ಅರ್ಧ ಗಂಟೆ ಬಳಿಕ ಒಂದು ಗೂಳಿ ಓಡಿ ಹೋಯಿತು. ಬಳಿಕ ಮತ್ತೊಂದು ಗೂಳಿ ಶಾಂತವಾಯಿತು.

Leave a Reply

Your email address will not be published. Required fields are marked *